ಬೆಂಗಳೂರಿನಲ್ಲಿ ಪೋಲೀಸ್ ಬಿಗಿ ಭದ್ರತೆ.....

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಗುರುವಾರ ಇಡೀ ದಿನ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಬೆಂಗಳೂರಿನ ಟೌನ್‌ಹಾಲ್‌ ಎದುರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು ಶುಕ್ರವಾರ ನಗರ ಶಾಂತವಾಗಿದೆ. ಸಿಲಿಕಾನ್‌ ಸಿಟಿಯಾದ್ಯಂತ ಇನ್ನೂ ಎರಡು ದಿನ ನಿಷೇಧಾಜ್ಞೆ ಮುಂದುವರೆದಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್‌ಹಾಲ್‌, ಮೈಸೂರು ಬ್ಯಾಂಕ್, ಸ್ವತಂತ್ರ ಉದ್ಯಾನ, ಶಿವಾಜಿನಗರ, ಟ್ಯಾನರಿ ರಸ್ತೆ ಸೇರಿದಂತೆ ಪ್ರತಿಭಟನೆ ಸಂಭಾವ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ಆರ್‌ಪಿ ಸೇರಿದಂತೆ ಅಗತ್ಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲವೆಡೆ ಸ್ಥಳೀಯ ಪೊಲೀಸರು ಪರೇಡ್ ನಡೆಸಿ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ಯಾವುದೇ ಅಹಿತಕರ ಘಟನೆಗಳಲ್ಲಿ ತೊಡಗಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಶಾಂತಿ ಕಾಪಾಡಬೇಕು ಎಂದು ಬೆಂಗಳೂರು ಪೊಲೀಸರು ಕೋರಿದ್ದಾರೆ.
ಇನ್ನು, ಸಾರ್ವಜನಿಕರ ಜನಜೀವನಕ್ಕೆ ಅಡ್ಡಿ ಉಂಟು ಮಾಡುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಗುರುವಾರ ಸೆಕ್ಷನ್‌ 144 ನಡುವೆಯೂ ಟೌನ್‌ಹಾಲ್‌, ಮೈಸೂರು ಬ್ಯಾಂಕ್‌ ಸರ್ಕಲ್‌ ಸುತ್ತಮುತ್ತ ಭಾರಿ ಪ್ರತಿಭಟನೆ ನಡೆದಿತ್ತು. ರಾಜಧಾನಿಯ ಪುರಭವನ ಎದುರಿನ ಪ್ರದೇಶ ಗುರುವಾರ ವಸ್ತುಶಃ ರಣಾಂಗಣವಾಗಿತ್ತು.