ಹೊಸ ಕೃಷಿ ಕಾಲೇಜುಗಳ ಅಗತ್ಯವಿಲ್ಲ - ಬಿ.ಸಿ ಪಾಟೀಲ್

ಬೆಳಗಾವಿ(Dec.31) : ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ  ಸಿರಿಗುಪ್ಪ ಶಾಸಕ ಸೋಮಲಿಂಗಪ್ಪ  ಅವರು ಕೃಷಿ ಕಾಲೇಜು ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಬೇಕೆಂದು ಸಲ್ಲಿಸಿದ್ದ ಶಿಫಾರಸ್ಸನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿರಸ್ಕರಿಸಿದ್ದಾರೆ.

      ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಸಿರಿಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಬಳ್ಳಾರಿಯಲ್ಲಿ ಕೃಷಿ ಕಾಲೇಜಿನ ಅಗತ್ಯವಿದೆ ಅದಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿವೆ ಕಾಲೇಜಿಗೆ ಬೇಕಾದ ಭೂಮಿ ಇದೆ.ಸಿರಿಗುಪ್ಪ ಹಡಗಲಿಯಲ್ಲಿ ಕೃಷಿ ತಜ್ಞರಿದ್ದಾರೆ ಅಲ್ಲದೆ ಜಿಲ್ಲಾಧಿಕಾರಿಗಳು ಈಗಾಗಲೇ ಡಿ.ಎಮ್.ಎಫ್ ಅಡಿಯಲ್ಲಿ 5 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ ಹಾಗೂ ಕರ್ನಾಟಕ ಕಲ್ಯಾಣ ಶಾಸಕರು ಎಲ್ಲರೂ ತಲ 2 ಕೋಟಿ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.

   ಆದರೆ ಕೃಷಿ ಸಚಿವರು ಇದು ಸದ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂದು ಉತ್ತರಿಸಿದ್ದಾರೆ ಹಾಗಾಗಿ ಜಿಲ್ಲೆಯ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ ಸರಕಾರ ಈ ಕುರಿತು ಇನ್ನೊಮ್ಮೆ ವಿಚಾರ ಮಾಡಬೇಕು. ಬಳ್ಳಾರಿಯಲ್ಲಿ ಕೃಷಿ ಕಾಲೇಜಿಗೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಬಿ.ಸಿ. ಪಾಟೀಲ್  ಕರ್ನಾಟಕದಲ್ಲಿ 4  ಕೃಷಿ ವಿಶ್ವವಿದ್ಯಾಲಯ, 1 ತೋಟಗಾರಿಕಾ ವಿಶ್ವವಿದ್ಯಾಲಯ, 1 ಪಶು ವಿಶ್ವವಿದ್ಯಾಲಯ ಸೇರಿದಂತೆ 6 ವಿಶ್ವವಿದ್ಯಾಲಯಗಳಿವೆ ಅದರಲ್ಲಿ ಪ್ರತಿ ವರ್ಷ 4೦೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಆದರೆ ಇನ್ನು ಶೇ.50ರಷ್ಟು ಸೀಟು ಬರ್ತಿಯಾಗುತ್ತಿಲ್ಲ. ಇರುವಂತಹ ಕಾಲೇಜುಗಳನ್ನು ಸದೃಡ ಪಡಿಸಬೇಕಿದೆ ಈ ನಿಟ್ಟಿನಲ್ಲಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಬರಿಸುವುದು,ಉಪನ್ಯಾಸಕರನ್ನು ಕಾಲೇಜಿಗೆ ನೀಡುವುದು ನಮ್ಮ ಮೊದಲ ಆದ್ಯತೆ ಇಲ್ಲದೆ ಹೋದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಈಗ ಇರುವ ಕಾಲೇಜುಗಳಿಗೆ ಸೌಲಭ್ಯ ಒದಗಿಸಿದ ನಂತರ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕೃಷಿ ಕಾಲೇಜುಗಳ ಸ್ಥಾಪನೆ ಬಗ್ಗೆ ಯೋಚನೆ ಮಾಡಬೇಕು ಎಂದು ಬಿಸಿ ಪಾಟೀಲ್  ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ