ಟ್ರಾಯ್ ಹೊಸ ನಿಯಮದ ಪ್ರಕಾರ ಕೇವಲ 3 ದಿನಗಳಲ್ಲಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ
ಟ್ರಾಯ್ ಹೊಸ ನಿಯಮದ ಪ್ರಕಾರ ಕೇವಲ 3 ದಿನಗಳಲ್ಲಿ ಮೊಬೈಲ್ ನಂಬರ್ ಪೋರ್ಟೆಬಿಲಿಟಿ ಸೇವೆ ಕಾರ್ಯರೂಪಕ್ಕೆ ಬರಲಿದೆ..
ನಿಮ್ಮ ಈಗಿನ ಮೊಬೈಲ್ ನೆಟ್‌ವರ್ಕ್ ನಿಧಾನ ಗತಿಯಲ್ಲಿ ಕಾರ್ಯ ನಿರ್ವಹಿಸುತ್ತದೇಯಾ?
ಬೇರೆ ನೆಟ್‌ವರ್ಕ್ ವೇಗದ ಡಾಟಾ ಹಾಗೂ ಕರೆ ಮಾಡಲು ಉತ್ತಮ ಕಾರ್ಯವ್ಯಾಪ್ತಿ ಹೊಂದಿದೆ ಅಂತ ನಿಮಗೆ ಅನಿಸುತ್ತಾ ಇದೆಯಾ. ಮತ್ತೇಕೆ ತಡ ಬೇರೆಯ ಕಂಪನಿಯ ನೆಟ್‌ವರ್ಕ್ ಗೆ ಹೋಗಲು ಇದು ಸೂಕ್ತ ಸಮಯ..!!
ಎಂಎನ್‌ಪಿ ಪ್ರಕ್ರಿಯೆಯು ಹೊಸ ನಿಯಮಗಳ ಅಡಿಯಲ್ಲಿ "ಐದು ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ "ಮತ್ತು ಹಿಂದಿನಂತೆ 15 ದಿನಗಳಲ್ಲ ಎಂದು TRAI ಹೇಳಿದೆ. ಈ ಹೊಸ ನಿಯಮ ಡಿಸೆಂಬರ್ 16 ರಿಂದ ಜಾರಿಗೆ ಯಾಗಲಿದೆ.
ಅಸಲಿಗೆ ಈ TRAI ಯಾರು? ಇದರ ಕೆಲಸವಾದರೂ ಏನು?
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ 1997 ರ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಭಾರತ ಸರ್ಕಾರವು ಸ್ಥಾಪಿಸಿದ ಶಾಸನಬದ್ಧ ಸಂಸ್ಥೆಯಾಗಿದೆ.
ಈ ಸಂಸ್ಥೆಯ ಈಗಿನ ಮುಖ್ಯಸ್ಥರು ರಾಮ್ ಸೇವಾಕ್ ಶರ್ಮ.ಹಾಗೂ ಸುನೀಲ್ ಕುಮಾರ್ ಗುಪ್ತಾ(IAS).
ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?
ಈ ಹಿಂದೆ, ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಮಾಡಲು 15 ದಿನಗಳವರೆಗೆ ತೆಗೆದುಕೊಂಡಿತ್ತು, ಅದನ್ನು ಈಗ ಮೂರರಿಂದ ಐದು ದಿನಗಳವರೆಗೆ ಕಡಿಮೆ ಮಾಡಲಾಗಿದೆ.
ದೇಶದ ಎಲ್ಲೆಡೆ ಈ ಸೇವೆ ಇಷ್ಟೇ ಕನಿಷ್ಠ ಸಮಯದಲ್ಲಿ ಆಗಲಿದೆಯೇ!! ಇಲ್ಲ ಯಾಕೆಂದರೆ ಉತ್ತರ ಇಲ್ಲಿದೆ ನೋಡಿ.
ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಲ್ಲಿ , ಪೋರ್ಟಿಂಗ್ ಪ್ರಕ್ರಿಯೆಯು ಪೂರ್ಣಗೊಳ್ಳಲು 15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.
ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ TRAI ಹೊಸ ನಿಯಮಗಳು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ (ಎಂಎನ್‌ಪಿ) ಪ್ರಕ್ರಿಯೆಯು ಮೊದಲಿಗಿಂತಲೂ ವೇಗವಾಗಿರುತ್ತದೆ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯನ್ (TRAI) ಇತ್ತೀಚೆಗೆ ಹೊರಡಿಸಿದ ನಿಯಮ ಪ್ರಕಾರ ಹೆಚ್ಚು ವೇಗ ಗೊಳ್ಳಲಿದೆ.