ವೃದ್ಧೆ ಮನೆಗೆ ನುಗ್ಗಿ ಕಳವು ಆರೋಪಿಗಳ ಸೆರೆ
ಬೆಂಗಳೂರು:-ಅಂಗವಿಕಲ ವೃದ್ಧೆಯ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಆನೇಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗೇಪಲ್ಲಿಯ ನಾರಾಯಣಸ್ವಾಮಿ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು.
ಆರೋಪಿಗಳು ಕಳೆದ ಆಗಸ್ಟ್‌ನಲ್ಲಿ ಆನೇಕಲ್ ಪಟ್ಟಣದ ಮನೆಯೊಂದಕ್ಕೆ ನುಗ್ಗಿ ಅಂಗವಿಕಲ ಒಂಟಿ ಮಹಿಳೆಯ ಕೈಕಾಲು ಕಟ್ಟಿ ಚಿನ್ನ, ಬೆಳ್ಳಿ ಹಾಗೂ ಒಂದು ಲಕ್ಷ ರೂ. ದೋಚಿ ಪರಾರಿಯಾಗಿದ್ದರು.
ಈ ಪ್ರಕರಣದ ಸಂಬಂಧ ದೂರು ದಾಖಲಿಸಿಕೊಂಡ ಆನೇಕಲ್ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ವೇಳೆ ಆರೋಪಿಗಳು ಕಳ್ಳತನ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದು, ಬಂಧಿತ ಆರೋಪಿಗಳಿಂದ ಕದ್ದೊಯ್ದಿದ್ದ ಚಿನ್ನ, ಬೆಳ್ಳಿ ಹಾಗೂ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.