ಹೈಟೆಕ್ ವೈಶ್ಯವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ

ಬೆಂಗಳೂರು: ಮಸಾಜ್ ಮತ್ತು ಸ್ಪಾ ಹೆಸರಿನಲ್ಲಿ ನಡೆಸಲಾಗುತ್ತಿದ್ದ ಹೈಟೆಕ್ ವೈಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರು ದಲ್ಲಾಳಿಗಳನ್ನು ಬಂಧಿಸಿ. ಮೂರು ಜನ ಯವತಿಯರನ್ನು ರಕ್ಷಣೆ ಮಾಡಿದ್ದಾರೆ. ಎಚ್‍ಎಎಲ್‍ನ ಈಸ್ಟರ್ನ್ ಸಲೂನ್ ಎಂಬ ಹೆಸರಿನಲ್ಲಿ ಸಿಕ್ಕಿಂ ಮತ್ತು ನಾಗಾಲ್ಯಾಂಡ್‍ನ ಯುವತಿಯರನ್ನು ಬಳಸಿಕೊಂಡು ಹಸಿ ಮಾಂಸದ ದಂದೆಯನ್ನು ನಡೆಸುತ್ತಿದ್ದರು. ಗಿರಾಕಿಗಳನ್ನು ಆನ್‍ಲೈನ್ ಅಲ್ಲಿ ಸೆಳೆದುಕೊಂಡು ಯುವತಿಯರ  ಫೋಟೋಗಳನ್ನು ಖಾಸಗಿಯಾಗಿ ಮೊಬೈಲ್‍ಗೆ ಕಳುಹಿಸಿ ವ್ಯವಹಾರ ಕುದುರಿಸುತ್ತಿದ್ದರು, ದಾಳಿ ನಡೆಸಿದ ಸಂದರ್ಭದಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದ ಮನೆಯಲ್ಲಿ ಕಾರ್ಡ್ ಸೈಪಿಂಗ್ ಮೆಷಿನ್ ಸಿಕ್ಕಿದ್ದು, ಮನೆಗೆ ಬರುತ್ತಿದ್ದ ಗಿರಾಕಿಗಳ ಬಳಿ ಹಣ ಇಲ್ಲದೆ ಹೋದರೆ ಅವರು ಕಾರ್ಡ್ ಅನ್ನು ಸೈಪ್ ಮಾಡಬಹುದಿತ್ತು.