
ಚೀನಾದೊಂದಿಗೆ ಲಿಂಕ್ ಹೊಂದಿದ 52 ಅಪ್ಲಿಕೇಷನ್ ಗಳನ್ನು ಬಳಸದಂತೆ ಎಚ್ಚರಿಸಿದ ಭಾರತೀಯ ಇಂಟೆಲ್ ಏಜೆನ್ಸಿಸ್ ..
ಚೀನಾದೊಂದಿಗೆ ಲಿಂಕ್ ಹೊಂದಿರುವ 52 ಮೊಬೈಲ್ ಆ್ಯಪ್ ಗಳನ್ನು ಬ್ಲಾಕ್ ಮಾಡಲು ಅಥವಾ ಅವುಗಳನ್ನು ಬಳಸದಂತೆ ಜನರಿಗೆ ಸಲಹೆ ನೀಡಲು ಭಾರತೀಯ ಗುಪ್ತಚರ ಸಂಸ್ಥೆಗಳು ಸರ್ಕಾರಕ್ಕೆ ತಿಳಿಸಿವೆ ಎಂದು ಹಿಂದೂಸ್ತಾನ್ ಟೈಮ್ಸ್, ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಈ 52 ಅಪ್ಲಿಕೇಷನ್ ಗಳ ಬಳಕೆ ಸುರಕ್ಷಿತವಲ್ಲ ಹಾಗೂ ಇವು ಭಾರತದ ಹೊರಗೆ ಹೆಚ್ಚಿನ ಪ್ರಮಾಣದ ಡೇಟಾವನ್ನು ಹೊರತೆಗೆಯುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.
ಗುಪ್ತಚರ ಸಂಸ್ಥೆಗಳ ಶಿಫಾರಸ್ಸನ್ನು ಇತ್ತೀಚೆಗೆ ರಾಷ್ಟ್ರೀಯ ಭದ್ರತಾ ಮಂಡಳಿಯ ಸಚಿವಾಲಯವು ಬೆಂಬಲಿಸಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರು ಈ 52 ಆ್ಯಪ್ ಗಳನ್ನು ಬಳಸುವುದು ಭಾರತದ ಭದ್ರತೆಗೆ ಹಾನಿಕರ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂಟಲ್ ಏಜೆನ್ಸಿಗಳಿಂದ ಸರ್ಕಾರಕ್ಕೆ ಕಳುಹಿಸಲಾದ ಅಪ್ಲಿಕೇಷನ್ ಗಳ ಪಟ್ಟಿಯಲ್ಲಿ, 'ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಷನ್ ಜೂಮ್, ಶಾರ್ಟ್ ವಿಡಿಯೋ ಆ್ಯಪ್ ಟಿಕ್ ಟಾಕ್, ಯು.ಸಿ. ಬ್ರೌಸರ್, ಕ್ಸೆಂಡರ್, ಶೇರಿಟ್ ಮತ್ತು ಕ್ಲೀನ್ ಮಾಸ್ಟರ್ ನಂತಹ ಇತರೆ ಉಪಯುಕ್ತ ಆ್ಯಪ್ಗಳು ಸೇರಿವೆ.