ಪತ್ನಿಗೆ ವರದಕ್ಷಿಣೆ ಕಿರುಕುಳ,ಆಕೆಯ ತಂಗಿಗೆ ಲೈಂಗಿಕ ಕಿರುಕುಳ.!!
ಬೆಂಗಳೊರ:- ಫ್ಲಿಪ್ಕಕಾರ್ಟ್ ಸಹ ಸಂಪಾದಕ ಸಚಿನ ಬನ್ಸಾಲ್ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ ಪತ್ನಿಯ ತಂಗಿಯ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪ ಕೇಳಿಬಂದಿದೆ. ಸಚಿನ್ ಬನ್ಸಾಲ್ ಹಾಗೂ ಪ್ರಿಯಾ ಬನ್ಸಾಲ್ ಅವರ ಮಧುವೆ 2008 ಏಪ್ರಿಲ್ 28 ರಂದು ಚಂದಿಗಡ್ ನಲ್ಲಿ ನೆಡೆದಿದ್ದು ಮದುವೆ ಸಮಯದಲ್ಲಿ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿತ್ತು. ಕಾರ್ ಖರೀದಿಗೆ 11 ಲಕ್ಷ ರೂಪಾಯಿ ನೀಡಲಾಗಿತ್ತು. ಸಚಿನ್ ಅವರ ತಂದೆ ತಾಯಿ, ಅವರ ಸಹೋದರರು ವರದಕ್ಷಿಣೆ ಹಾಗೂ ಉಡುಗೊರೆಗಾಗಿ ಬೇಡಿಕೆಯಿತ್ತಿದ್ದರು ಎಂದು ಆರೋಪಿಸಿದ್ದಾರೆ.
ಮಧುವೆ ಬಳಿಕ ಇವರಿಬ್ಬರು ಬೆಂಗಳೂರಿನಲ್ಲಿ ವಾಸವಾಗಿದ್ದು .ಒಂದು ಗಂಡು ಮಗುವಿದೆ. ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಸಚಿನ ಅವರು ಬಲವಂತ ಮಾಡಿತ್ತಿದ್ದರು. ವರದಕ್ಷಿಣೆಗಾಗಿ ದಿನನಿತ್ಯ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ ದೆಹಲಿಯಲ್ಲಿರುವ ನನ್ನ ತಂಗಿಯ ಮೇಲೆಯೂ ಸಹ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಕೋರಮಂಗಲ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.