ಜಾರ್ಖಂಡ್ ನಲ್ಲಿ ಅಧಿಕಾರದ ಗದ್ದುಗೆ ಕಮಲ ಪಾಳಯಕ್ಕೋ..? ಕೈ ಮೈತ್ರಿಗೋ....?

 

ಜಾರ್ಖಂಡ್ : ಜಾರ್ಖಂಡ್ ನಲ್ಲಿ ನಡೆದ ವಿಧಾನಸಭಾ 
ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು, ಮತದಾರರ ಒಲವು ಯಾರ ಪರವಾಗಿದೆ ಎನ್ನುವುದು ಇಂದು 
ಗೊತ್ತಾಗಲಿದೆ.

ಸಮೀಕ್ಷೆಗಳ ಪ್ರಕಾರ ಆಡಳಿತ ಪಕ್ಷ ಬಿಜೆಪಿ ಈ ಬಾರಿ ತನ್ನ 
ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಆರ್ ಜೆಡಿ ಹಾಗೂ 
ಜಾರ್ಖಂಡ್ ಮುಕ್ತಿ ಮೋರ್ಚಾ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ
 ಬರುವ ಮುನ್ಸೂಚನೆ ಸಿಕ್ಕಿದೆ.

ಇನ್ನು ಜಾರ್ಖಂಡ್ ನ  81 ವಿಧಾನಸಭಾ ಕ್ಷೇತ್ರಗಳಿಗೆ 
ನವೆಂಬರ್ 30 ರಿಂದ ಡಿಸೆಂಬರ್ 20 ರವರೆಗೆ ಐದು 
ಹಂತಗಳಲ್ಲಿ ಮತದಾನ ನಡೆದಿತ್ತು. ಜಾರ್ಖಂಡ್ 
ವಿಧಾನಸಭಾ ಮ್ಯಾಜಿಕ್ ನಂಬರ್ 41. ಈ ಬಾರಿ ಬಿಜೆಪಿ 
ವಿರುದ್ಧ ಕಾಂಗ್ರೆಸ್ ಹಾಗೂ ಆರ್ ಜೆಡಿ ಜೊತೆ  ಜಾರ್ಖಂಡ್ ಮುಕ್ತಿ ಮೋರ್ಚ ಮಹಾಮೈತ್ರಿ ರಚಿಸಿಕೊಂಡು ಚುನಾವಣೆಯನ್ನು ಎದುರಿಸಿದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿದೆ.

ಇನ್ನು ಬಿಜೆಪಿ ಕೂಡ ಸರಳ ಬಹುಮತದ ನಿರೀಕ್ಷೆಯಲ್ಲಿದ್ದು ,ಮರಳಿ ಅಧಿಕಾರದ ಗದ್ದುಗೆ ಹಿಡಿಯುವ ಯೋಚನೆಯಲ್ಲಿದೆ.