
ಅಕ್ರಮ ಲಾಟರಿ ಮಾರಾಟ : ಮಾಲು ಸಹಿತ ಓರ್ವನ ಬಂಧನ
ಮಡಿಕೇರಿ :- ಕುಟ್ಟಾ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂಬುಕೊಲ್ಲಿಯಲ್ಲಿ ಅಕ್ರಮವಾಗಿ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಾಲು ಸಹಿತ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಲಾಟರಿ ಟಿಕೇಟ್‍ಗಳ ಮಾರಾಟ ನಿಷೇಧವಿದ್ದರೂ ಕೇರಳ ರಾಜ್ಯದ ಲಾಟರಿ ಟಿಕೇಟುಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕುಟ್ಟಾದಲ್ಲಿ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಕೇಂಬುಕೊಲ್ಲಿಯಲ್ಲಿ ಲಾಟರಿ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ದೊರೆತ ಹಿನ್ನೆಲೆ ಠಾಣಾಧಿಕಾರಿ ಹೆಚ್.ಜೆ.
ಚಂದ್ರಪ್ಪ ಅವರು ದಾಳಿ ಮಾಡಿ ಕುಟ್ಟಾ ಗ್ರಾಮದ ನಿವಾಸಿ ಎಂ.ರಾಜ ಎಂಬುವವರನ್ನು ವಿಚಾರಣೆಗೆ ಒಳಪಡಿಸಿ 6 ಸಾವಿರ ರೂ. ಮೌಲ್ಯದ ಕೇರಳ ರಾಜ್ಯದ ಲಾಟರಿ ಟಿಕೆಟ್ ಹಾಗೂ ಬೈಕ್ ಅನ್ನು ವಶಪಡೆದುಕೊಂಡರು.
ಸಿಬ್ಬಂದಿಗಳಾದ ರಾಜೇಶ್, ಬಿ.ಎಸ್.ಮೋಹನ್ ಕುಮಾರ್,ಕುಟ್ಟಾ ಎ ಎಸ್ ಐ,ಎಚ್.ಕೆ.ಸಣ್ಣಪ್ಪ .ವಾಹನ ಚಾಲಕ ಕೆ.ಟಿ.ಮೋಹನ್ ಕುಮಾರ್ ಅವರುಗಳು ಕುಟ್ಟಾ ವಲಯದ ವೃತ್ತ ನಿರೀಕ್ಷಕ ಪರಶಿವ ಮೂರ್ತಿಯವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ,ಅಪರಾಧಿಗಳನ್ನು ಬಂಧಿಸಿದರು.