ಪುಟ್ಟ ವಯಸ್ಸಿನ ದೊಡ್ಡ ಅಭಿಮಾನಿಯ ಆಸ್ಪತ್ರೆ ವೆಚ್ಚ ಭರಿಸಿದ ಅಪ್ಪು...!
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾದ ಆದರ್ಶ್ನನನ್ನು ಅಪ್ಪು ಭೇಟಿಯಾಗುವ ಮೂಲಕ ಈ ಪುಟ್ಟ ಬಾಲಕನ ಕನಸನ್ನು ನನಸು ಮಾಡಿದ್ದಾರೆ. 16ವರ್ಷದ ಆದರ್ಶನಿಗೆ ಹುಟ್ಟಿದಾಗಿನಿಂದಲೂ ವಿಕಲಚೇತನ ಸಮಸ್ಯೆಯಿದ್ದು, ಇವನ ತಂದೆ ತಾಯಿಯರ ಆರ್ಥಿಕ ಸ್ಥಿತಿ ಅಷ್ಟು ಚೆನ್ನಾಗಿಲ್ಲದಿರುವ ಕಾರಣ ಇವನಿಗೆ ಸರಿಯಾದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಆದರೆ ಈಗ ಪವರ್ ಸ್ಟಾರ್ ತಮ್ಮ ಈ ಪುಟ್ಟ ಅಭಿಮಾನಿಯ ಆಸ್ಪತ್ರೆಯ ವೆಚ್ಚವನ್ನು ಭರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಆದರ್ಶ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ ಹನುಮಂತ ಮತ್ತು ರೇಖಾ ಅವರ ಪುತ್ರ. ಇವನ ತಂದೆ ಆಟೋ ಚಾಲಕನಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾಲಕ ತನ್ನ ಮನೆಯ ಗೋಡೆಗಳ ಮೇಲೆಲ್ಲಾ ಪುನೀತ್ ರಾಜ್ ಕುಮಾರ್ ಫೋಟೋಸ್ ಹಚ್ಚಿಕೊಂಡಿದ್ದಾನೆ. ಇನ್ನು ಇವನು ಅಪ್ಪು ಅವರ ಸಿನಿಮಾ ಹಾಕಿದ್ರೆ ಸಾಕು ಕಣ್ಣು ಮಿಟುಕಿಸಿದೆ ಸಿನಿಮಾ ನೋಡ್ತಾ ಕೂರ್ತಾನೆ. ಈತನಿಗೆ ಅಪ್ಪು ಅವರ ಡ್ಯಾನ್ಸ್, ಫೈಟ್ ಮತ್ತೆ ಆ್ಯಕ್ಟಿಂಗ್ ಅಂದ್ರೆ ತುಂಬಾ ಇಷ್ಟ ಅಂತೆ.
ಆದರ್ಶ ಕೆಲವು ದಿನಗಳ ಹಿಂದೆಯಷ್ಟೇ ಮಾಧ್ಯಮಗಳ ಮುಂದೆ, ತಾನು ಅಪ್ಪು ಅವರನ್ನು ಒಮ್ಮೆಯಾದರೂ ಭೇಟಿಯಾಗುವುದೇ ತನ್ನ ಜೀವನದ ಮಹತ್ವಾಕಾಂಕ್ಷೆ ಎಂದು ಹಂಚಿಕೊಂಡಿದ್ದನು. ಈ ಬಗ್ಗೆ ತಿಳಿದ ಪುನೀತ್ ರಾಜ್ ಕುಮಾರ್ ಆದರ್ಶ್ನನನ್ನು ತಮ್ಮ ಮನೆಗೆ ಕರೆಸಿಕೊಂಡು, ಅವನ ಜೊತೆ ಕೆಲ ಸಮಯ ಕೆಲ ಸಮಯ ಕಳೆದಿದ್ದೇ, ಈ ಬಾಲಕನ ಆಸ್ಪತ್ರೆಯ ವೆಚ್ಚವನ್ನು ಭರಿಸಿದ್ದಾರೆ.