ಭಾರತ ತಂಡಕ್ಕೆ ಪೊಂಗಲ್ ಸಿಹಿ ಇಲ್ಲ......
ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ಕೇವಲ 10 ರನ್ ಗಳಿಸಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ನಂತರ ಧವನ್ ಮತ್ತು ರಾಹುಲ್ ಜೊತೆಗೂಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು, ಅರ್ಥ ಶತಕ ಬಾರಿಸಲೂ ಎಡವಿದ ರಾಹುಲ್ 47 ರನ್ ಗಳಿಸಿ ಅಗರ್ ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಉತ್ತಮ ಆಟವಾಡುತ್ತಿದ್ದ ಧವನ್ 74 ರನ್ ಗಳಿಸಿದ್ದಗಾ ಪ್ಯಾಟ್ ಕಮಿನ್ಸ್ ಪೆವಿಲಿಯನ್ಗೆ ಕಳಿಸಿದರು. ಸುಭದ್ರ ಸ್ಥಿತಿಯಲ್ಲಿ ಇದ್ದ ಭಾರತದ ಮಧ್ಯಮ ಕ್ರಮಾಂಕ ಧಿಡೀರ್ ಕುಸಿತ ಕಂಡಿತು. ನಾಯಕ ವಿರಾಟ್ ಕೊಹ್ಲಿ 16, ಭರವಸೆ ಮೂಡಿಸಿದ್ದ ಶ್ರೇಯಸ್ ಅಯ್ಯರ್ ಕೇವಲ 04 ರನ್ ಸಿಡಿಸಿ ನಿರಾಸೆ ಮೂಡಿಸಿದರು,ನಂತರ ರಿಷಬ್ ಪಂತ್ 28 ರನ್, ರವೀಂದ್ರ ಜಡೇಜಾ 25, ಶಾರ್ದೂಲ್ 13, ಶಮಿ 10 ಯಾದವ್ 17 ರನ್ ಗಳಿಸುವ ಮೂಲಕ ಭಾರತ 49.1 ಓವರ್ ಗಳಲ್ಲಿ 255 ರನ್ ಗಳಿಸಲು ಶಕ್ತವಾಗಿತು.
ಮಿಚೆಲ್ ಸ್ಟಾರ್ಕ್ 3 ವಿಕೆಟ್ ,ಕಮಿನ್ಸ್ 2 ,ಕೇನ್ ರಿಚರ್ಡ್ಸನ್ 2 ವಿಕೆಟ್ , ಜಂಪ್ ಹಾಗೂ ಅಗರ್ ತಲಾ 1ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯಾದ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಹಾಗೂ ನಾಯಕ ಫಿಂಚ್ ಅಮೋಘ ಶತಕ ನೆರವಿನಿಂದ ಸುಲಭವಾಗಿ ಗುರಿ ತಲುಪಿತು, 37.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 258 ರನ್ ಬಾರಿಸಿ ಗೆಲ್ಲುವ ಮೂಲಕ ಸರಣಿಯಲ್ಲಿ 0-1 ಮುನ್ನಡೆ ಪಡೆದುಕೊಡೆದೆ.