ಮೌನಂ ಚಲುವೆ ಮಯೂರಿ ಮಾತಿಗಿಳಿದಾಗ..
ರಾಜ್ ಪಂಡಿತ್ ನಿರ್ದೇಶನದ ಮೌನo ಸಿನಿಮಾ ಫೆಬ್ರವರಿ 7 ಕ್ಕೆ ತೆರೆಗೆ ಬರಲು ಸಜ್ಜಾಗಿದ್ದು ,ಈ ಸಿನಿಮಾದ ಬಗ್ಗೆ ಮಾತನಾಡಿದ ನಾಯಕ ನಟಿ ಮಯೂರಿ ಹಲವಾರು ಸಂಗತಿಗಳನ್ನು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ .
ಸಿನಿಮಾ ಮತ್ತು ಪಾತ್ರದ ಬಗ್ಗೆ ಮನಬಿಚ್ಚಿ ಆಲ್ಮಾನ್ಯೂಸ್24 ಜೊತೆ ನಡೆಸಿದ ಮಾತುಕತೆ ಇಲ್ಲಿದೆ
1.ಮೌನo ಸಿನಿಮಾದಲ್ಲಿ ನಿಮ್ಮ ಪಾತ್ರ ಹೇಗಿದೆ ?
:ನನ್ನ ಪಾತ್ರದ ಹೆಸರು ಕೂಡ ಮಯೂರಿ ಅಂತಾನೆ ,ಇದೊಂದು ಕಾಲೇಜ್ ಹುಡುಗಿಯ ಪಾತ್ರ.ಅವಳು ಎಲ್ಲರಿಗಿಂತ ಡಿಫ್ರೆಂಟ್ ಆಗಿ ಇರ್ತಾಳೆ , ತುಂಬಾ attitude ಅಲ್ಲೇ ಕಾಲೇಜ್ ಲೈಫ್ ನಾ ಎಂಜಾಯ್ ಮಾಡ್ತಾ ಇರ್ತಾಳೆ .ಒಂದು ಘಟನೆ ಇಂದ ಅವಳ ಲೈಫ್ ಬದಲಾಗುತ್ತೆ .ಅದೇನು ಅಂತ ಸಿನಿಮಾಕ್ಕೆ ಬಂದು ನೋಡಿ .
2.ಧಾರಾವಾಹಿ ಅಥವಾ ಸಿನಿಮಾ ಇವೆರಡರಲ್ಲಿ ಆಯ್ಕೆ ಇಟ್ಟರೆ ಯಾವುದು ಆರಿಸಿ ಕೊಳ್ಳುತ್ತಿರಾ?
:ಎಲ್ಲವೂ ನಟನೆಯೇ,ನನಗೆ ನಟನೆ ಅಂದ್ರೇನೇ ಇಷ್ಟ, ಇವೆರಡು ನನ್ನ ಕಣ್ಣುಗಳು so ನನಗೆ ಎರಡು ಕಣ್ಣು ಮುಖ್ಯ .
3.ಈ ಸಿನಿಮಾ ದ ಪೋಸ್ಟರ್ ನೋಡಿದ್ರೆ ಮಹಿಳೆ ಪ್ರಾಧಾನ ಚಿತ್ರ ಅನಿಸುತ್ತದೆ ಅದು ಹೌದೆ..?
:ಹಾಗೇನೂ ಇಲ್ಲ ಎಲ್ಲ ಪಾತ್ರಕ್ಕೂ ಪ್ರಾಧಾನ್ಯತೆ ಇದೆ ಅದ್ರಲ್ಲೂ ನನ್ನ ಪಾತ್ರ ಬಹು ಮುಖ್ಯ ವಾಗಿದೆ ಮೂಡಿಬಂದಿದೆ.
4.ನಿಮ್ಮ ಸಿನಿಮಾ ಲೈಫ್ ಹೇಗಿದೆ ?
:ತುಂಬಾನೇ ಚನ್ನಾಗಿ ನೇಡಿತಿದೆ 2020 ಕ್ಕೆ 2 ಸಿನಿಮಾ ಈಗಾಗಲೇ ಬಂದಿದೆ.
5.ಮೌನo ಸಿನಿಮಾದ ಶೂಟಿಂಗ್ ಎಲ್ಲೆಲ್ಲಿ ಮಾಡಿದ್ದಿರಾ?
ಬೆಂಗಳೂರು ಅಕ್ಕ ಪಕ್ಕನೆ ನೆಡೆದಿದೆ .ಒಂದ್ ಸಾಂಗ್ ಮಾತ್ರ ಚಿಕ್ಕಮಗಳೂರು ನಲ್ಲಿ ಮಾಡಿದಿವಿ ,ತುಂಬಾನೇ ಚನ್ನಾಗಿ ನೆಡೆದಿದೆ .
6.ನಿಮ್ಮ ಸಿನಿಮಾದಲ್ಲಿ ಜನರಿಗೆ ಯಾವ ಸಂದೇಶವಿದೆ ?
:ಮನುಷ್ಯನಿಗೆ ಮನಸೇ ಶತ್ರು ,ಅದನ್ನು ಹೇಗೆ ನಿಯಂತ್ರಿಸಬೇಕು ಮತ್ತೆ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎನ್ನೋದು ಸಿನಿಮಾದ ಒನ್ ಲೈನ್ ಅಂದಷ್ಟೇ ಹೇಳಿ ಪ್ರೇಕ್ಷಕರಲ್ಲಿ ಕುತೂಹಲ ದ ಹುಳ ಬಿಟ್ಟರು.