ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಪರಿಹಾರ.........

ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎಂಬ ಹಂಬಲಕ್ಕೆ ಸಿಕ್ಕ ಸಿಕ್ಕ ಕ್ರೀಂಗಳನ್ನು ಬಳಸುತ್ತಾರೆ. ಹೀಗೆ ಬಳಸುವುದರಿಂದ ಡಾರ್ಕ್ ಸರ್ಕಲ್‌ ಬರಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.

- ಹೆಚ್ಚು ಬಿಸಿಲಿನಲ್ಲಿ ಓಡಾಡಿದರೆ ಕೆಲವರಿಗೆ ಈ ಸಮಸ್ಯೆ ಬರುತ್ತದೆ. ಅತೀ ಬಿಸಿಲಿಗೆ ಮುಖ, ಮೈ ಒಡ್ಡುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಬಳಲಿಕೆ ಉಂಟಾಗುತ್ತದೆ. ಆಗ ಕಣ್ಣಿನ ಕೆಳಭಾಗದ ಚರ್ಮ ಹೆಚ್ಚು ಕಪ್ಪಗಾಗಿ ಮುಖದ ಚರ್ಮದ ಬಣ್ಣಕ್ಕಿಂತ ಭಿನ್ನವಾಗಿ ಕಾಣಬಹುದು.

ಡಾರ್ಕ್ ಸರ್ಕಲ್ ಗೆ ಇಲ್ಲಿದೆ ಪರಿಹಾರ..!

ಬದುಕಿನ ಜಂಟಾಟಗಳಿಂದ ಮುಕ್ತರಾಗಿ ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡಿ.

- ಹೆಚ್ಚೆಚ್ಚು ಹಸಿರು ತರಕಾರಿಗಳನ್ನು ಸೇವನೆ ಮಾಡಿ.

- ಮದ್ಯಪಾನ, ಧೂಮಪಾನದಂತಹ ಚಟಗಳನ್ನು ತ್ಯಜಿಸಿ.

- ಅತಿಯಾಗಿ ಸೌಂದರ್ಯ ವರ್ಧಕಗಳನ್ನು ಬಳಸಬೇಡಿ.

- ಪೌಷ್ಟಿಕಾಂಶಯುಕ್ತ ಕಾಳುಗಳನ್ನು ಸೇವನೆ ಮಾಡಿ.

- ಆಲೂಗಡ್ಡೆ ಅಥವಾ ಸೌತೆಕಾಯಿ ರಸವನ್ನು ಕಪ್ಪು ವರ್ತುಲದ ಸುತ್ತ ಹಚ್ಚಿ.

- ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಿ.

ಇಂದಿನ ಒತ್ತಡ ಬದುಕಿನಲ್ಲಿ ಈ ಕಪ್ಪು ವರ್ತುಲ ಬಡವ, ಶ್ರೀಮಂತ ಎನ್ನದೇ ಎಲ್ಲರನ್ನು ಆವರಿಸಿಕೊಳ್ಳುತ್ತಿದೆ. ಇದರಿಂದ ವ್ಯಕ್ತಿ ಆತ್ಮವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕಪ್ಪು ವರ್ತುಲದ ಬಗ್ಗೆ ಹೆಚ್ಚು ಗಮನ ಹರಿಸುವುದು ಅವಶ್ಯ. ಹೀಗಾಗಿ ನಮ್ಮ ಜೀವನ ಕ್ರಮದಲ್ಲಿ ಹಾಗೂ ನಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ.