ಎಲಿವೇಟರ್ ರಸ್ತೆ ಯೋಜನೆಗೆ ಮರುಜೀವ : ಅಂದು ವಿರೋಧಿಸಿ ಇಂದು ನಿಲುವು ಬದಲು

ವಿರೋದ ಪಕ್ಷದಲ್ಲಿದ್ದಾಗ ಎಲಿವೇಟರ್ ಕಾರಿಡಾರ್ ಯೋಜನೆಯನ್ನ ವಿರೋದಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆ ಜಾರಿಗೆ ಮುಂದಾಗಿದೆ.
 ಈ ಯೋಜನೆಯನ್ನು ಹಂತ ಹಂತವಾಗಿ ಜಾರಿಗೆ ತರಬೇಕು ಮೊದಲ ಹಂತದ ಅನುಷ್ಠಾನಕ್ಕೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ಒದಗಿಸಬೇಕು ಎಂದು ಬಿಜೆಪಿ ಶಾಸಕರು ಒತ್ತಾಯಿಸಿದ್ದಾರೆ.
ನಗರದ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕರು, ಸಚಿವರು ಉಪಮುಖ್ಯಮಂತ್ರಿ ಸಿಎನ್ ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ.

ಈ ಯೋಜನೆಗೆ ಅಂದಾಜು 26000 ಸಾವಿರ ಕೋಟಿಗೂ ಅಧಿಕ ಅನುದಾನ ಬೇಕು ಒಮ್ಮೆಲೆ ಇಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸಲು ಕಷ್ಟ ಹೀಗಾಗಿ ಮೊದಲ ಹಂತದಲ್ಲಿ ಕೆಆರ್ ಪುರಂ ಯಶವಂತಪುರ ಕಾರಿಡಾರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
ಇದಕ್ಕೆ ಈ ಬಾರಿಯ ಬಜೆಟ್ನಲ್ಲಿ ಅನುದಾನ ಒದಗಿಸುವಂತೆ ಮನವಿ ಮಾಡಲು ಶಾಸಕರು ನಿರ್ಧರಿಸಿದ್ದಾರೆ.
87 ಕಿ.ಮೀ ಎಲಿವೇಟರ್ ಕಾರಿಡಾರ್ಗಳ ಒಟ್ಟು ಉದ್ದ .
ಇದಕ್ಕೆ ತಗಲುವ ವೆಚ್ಚ  26000 ಕೋಟಿ .