ಪರಪ್ಪನ ಅಗ್ರಹಾರದಲ್ಲಿ ಸರಣಿ ಸಾವು ......!!

ಕಳೆದ 18 ದಿನಗಳಲ್ಲಿ ಪರಪ್ಪನ ಅಗ್ರಹಾರ ದಲ್ಲಿ ಒಟ್ಟು 5 ಮಂದಿ ಸರಣಿ ಸಾವನ್ನೊಪ್ಪಿದ್ದಾರೆ .

 

ಕೋಲೆ,ಕೊಲೆ ಪ್ರಯತ್ನ ,ದರೊಡೆ ಸೇರಿದಂತೆ ಇನ್ನು  ವಿಭಿನ್ನ  ಕೃತ್ಯವನ್ನು ಎಸಗಿರುವಂತ ಹಲವಾರು ಕೈದಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೂ.

 

ಈ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕೈದಿಗಳಿಗೆ ಜೈಲಿನ ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯೋಪಾಚಾರ ನೀಡಿದ ಅಧಿಕಾರಿಗಳು , ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

 

ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕೈದಿಗಳಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಯಿತು. ಕೆಂಚಮ್ಮ ಮತ್ತು ಕಲ್ಲಪ್ಪ ಅವರು 75 ವರ್ಷ ವಯಸ್ಸಿನವರಾಗಿದ್ದು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯ ಸಂಬಂಧಿ ಕಾಯಿಲೆಯೂ ಕೂಡ ಅವರಿಗಿತ್ತು.

 

 

ಇನ್ನುಳಿದಂತೆ ವೀರೇಶ್ ಮತ್ತು ಮೊಹಮ್ಮದ್ ರಂಜಾನ್ ಸಹ ಮಧುಮೇಹ ಕಾಯಿಲೆಗೆ ತುತ್ತಾಗಿದ್ದರು. ಹಲವು ವರ್ಷಗಳಿಂದ ಅಬ್ದುಲ್ ಹಮೀದ್ ಅವರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರು.

 

ಕಾಯಿಲೆಗಳಿಂದ ಬಳಲುತ್ತಿದ್ದ ಕೈದಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೇರೆ ಕಾರಾಗೃಹಗಳಿಂದ ವರ್ಗಾವಣೆಯಾಗಿ ಬಂದಿದ್ದವರು ಎಂದು ಕಾರಾಗೃಹದ ಮುಖ್ಯ ಅಧೀಕ್ಷರು ತಿಳಿಸಿದ್ದಾರೆ.