ಫ್ರಾನ್ಸ್ನ್ ನ್ ರಫೇಲ್ ಫೈಟರ್ ಜೆಟ್ ಭಾರತಕ್ಕೆ ಶೀಘ್ರದಲ್ಲೇ

ಫ್ರಾನ್ಸ್ ರಫೇಲ್ ಫೈಟರ್ ಜೆಟ್ ಭಾರತಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಮತ್ತಷ್ಟು ವೇಗ ದೊರೆತಿದ್ದೆ. ಇಂಡಿಯನ್​ ಏರ್​ ಫೋರ್ಸ್ (ಐಎಎಫ್) ವಿಶೇಷ ಕೋರಿಕೆಯ ಮೇರೆಗೆ, ಫೈಟರ್ ಜೆಟ್ ಪೊರೈಸಲು ಕ್ಯಾಲೆಂಡರ್​ ಅನ್ನು ಮರುಸೃಷ್ಟಿಸುತ್ತೆವೆ ಎಂದು ಸೋಮವಾರ ಖಚಿತಪಡಿಸಿದ್ದಾರೆ. ಭಾರತ ಚೀನಾ ಗಡಿಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆ ಈ ಪ್ರಸ್ತಾವಕ್ಕೆ ವೇಗ ಪಡೆದಿದೆ. ಆರು ಯದ್ಧ ವಿಮಾನವನ್ನು ಜುಲೈ 27ರಂದು ಅಂಬಾಲದದ ವಾಯುನೆಲೆಯಲ್ಲಿ ಇಳಿಸುವ ಸಾಧ್ಯತೆಯಿದೆ. ಮೊದಲ ಬ್ಯಾಚ್​ನಲ್ಲಿ ನಾಲ್ಕರ ಬದಲು ಆರು ಯುದ್ಧ ವಿಮಾನ ನೀಡಲಾಗುವುದು ಡಸಾಲ್ಟ್ ಏವಿಯೇಷನ್​ ತಿಳಿಸಿದೆ. ಭಾರತ ಸೆಪ್ಟೆಂಬರ್ 2016ರಲ್ಲಿ 59,ಸಾವಿರ ಕೋಟಿ ಮೌಲ್ಯದ ಒಪ್ಪಂದ ಮಾಡಿಕೊಂಡಿತ್ತು.ಈ ಒಪ್ಪಂದ ರಾಜಕಾರಣದಲ್ಲಿ  ಸಾಕಷ್ಟು ಚರ್ಚಗೆ  ಎಡೆಮಾಡಿಕೊಟ್ಟಿದ ವಿಷಯ ಎಂಬುದು ಜಗತ್​ ಜಾಹೀರಾದ ವಿಷಯವೆ ಸರಿ.