ಯೋಗಾಸನದ ನಂತ್ರ ಅಪ್ಪಿತಪ್ಪಿಯೂ ಮಾಡ್ಬೇಡಿ ಈ ತಪ್ಪು

Yoga tips in Kannada: ಅನೇಕರು ಪ್ರತಿ ದಿನ ಯೋಗಾಸನ ಮಾಡ್ತಾರೆ. ಆದ್ರೆ ಯೋಗ ಮಾಡುವ ವಿಧಾನ ಹಾಗೂ ಯೋಗದ ಮೊದಲು ಹಾಗೂ ನಂತ್ರ ಏನ್ಮಾಡ್ಬೇಕು ಎಂಬುದು ಗೊತ್ತಿರೋದಿಲ್ಲ. ಆ ತಪ್ಪುಗಳು, ಯೋಗದ ಫಲಿತಾಂಶ ಸಂಪೂರ್ಣವಾಗಿ ಸಿಗದಂತೆ ಮಾಡುತ್ತದೆ.

ಯೋಗಾಸನ (Yogasana) ವು ಆರೋಗ್ಯಕರ (Healthy) ದೇಹ ಮತ್ತು ಆರೋಗ್ಯಕರ ಮನಸ್ಸಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಯೋಗದಿಂದ ಅನೇಕ  ದೈಹಿಕ ಮತ್ತು ಮಾನಸಿಕ ಸಮಸ್ಯೆಗೆ ಮುಕ್ತಿ ಸಿಗುತ್ತದೆ.  ಯೋಗವು ರೋಗನಿರೋಧಕ ಶಕ್ತಿ (Immunity) ಯನ್ನು ಬಲಪಡಿಸುತ್ತದೆ.  ಶೀತದಂತಹ ಸಣ್ಣಪುಟ್ಟ ರೋಗಕ್ಕೆ ಪರಿಹಾರವನ್ನು ನೀಡುತ್ತದೆ. ಇದ್ರ  ಜೊತೆಗೆ ದೊಡ್ಡ ರೋಗ (Disease) ಗಳಿಗೂ ಯೋಗ ಪರಿಣಾಮಕಾರಿ.

ಮಾನವನ ದೇಹದಲ್ಲಿದೆಯಂತೆ ಮತ್ತೊಂದು ಅಂಗ, ಶ್ವಾಸಕೋಶದಲ್ಲಿ ಅಡಗಿರುವ ಅಂಗ ಪತ್ತೆ ಹಚ್ಚಿದ ವಿಜ್ಞಾನಿಗಳು!

ನಿಯಮಿತ ಯೋಗಾಭ್ಯಾಸವು ದೇಹವನ್ನು ಅನೇಕ ರೋಗಗಳಿಂದ ಸುರಕ್ಷಿತವಾಗಿರಿಸುತ್ತದೆ.  ತೂಕ (Weight) ವನ್ನು ನಿಯಂತ್ರಿಸುತ್ತದೆ. ಕಳಪೆ ಜೀವನಶೈಲಿ (Lifestyle) ಯಿಂದ ಚಿಕ್ಕ ವಯಸ್ಸಿನಲ್ಲಿಯೇ ಜನರು ಅನೇಕ ಸಮಸ್ಯೆಗೆ ಒಳಗಾಗ್ತಾರೆ. ದೃಷ್ಟಿ ಸಮಸ್ಯೆಯಿಂದ ಹಿಡಿದು ಕೂದಲು (Hair) ಉದುರುವಿಕೆಯವರೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ರೆ ಯೋಗ ಈ ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ. ಅನೇಕರು ಯೋಗಾಸನವನ್ನು ನಿಯಮಿತವಾಗಿ ಮಾಡ್ತಾರೆ. ಆದ್ರೆ ಆರೋಗ್ಯ ಮಾತ್ರ ಸುಧಾರಿಸುವುದಿಲ್ಲ. ಇದಕ್ಕೆ ಯೋಗ ಮಾಡುವ ವಿಧಾನ ಹಾಗೂ ಯೋಗದ ನಂತ್ರ ಮಾಡುವ ಚಟುವಟಿಕೆಗಳೂ ಕಾರಣವಾಗುತ್ತವೆ. ಯೋಗದ ನಂತ್ರ ಕೆಲವೊಂದು ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬಾರದು. ಇಂದು ಯೋಗ ಮಾಡಿದ ನಂತ್ರ ಯಾವ ಕೆಲಸ ಮಾಡ್ಬಾರದು ಎಂಬುದನ್ನು ಹೇಳ್ತೇವೆ.

ಯೋಗಾಸನ ಮಾಡಿದ ತಕ್ಷಣ ಮಾಡ್ಬೇಡಿ ಈ ಕೆಲಸ :
ಯೋಗದ ನಂತರ ನೀರು ಕುಡಿಯಬೇಡಿ : ಯೋಗವಿರಲಿ ಇಲ್ಲ ವ್ಯಾಯಾಮವಿರಲಿ ಅಭ್ಯಾಸ ಮಾಡುವ ಸಮಯದಲ್ಲಿ ನೀರು ಸೇವನೆ ಮಾಡಬಾರದು. ಹಾಗೆಯೇ ಯೋಗ ಮಾಡುವ ಸಮಯಕ್ಕಿಂತ ಮೊದಲೂ ನೀರು ಕುಡಿಯಬಾರದು. ಯೋಗಾಭ್ಯಾಸ ಮಾಡಿದ ತಕ್ಷಣ ಕೂಡ ನೀರು ಕುಡಿಯಬಾರದು. ಯೋಗದ ನಂತರ ನೀರು ಕುಡಿಯುವುದರಿಂದ ಗಂಟಲಿನಲ್ಲಿ ಕಫ ಉಂಟಾಗುತ್ತದೆ. ಹಾಗಾಗಿ ಯೋಗಾಭ್ಯಾಸ ಮಾಡಿದ ನಂತರ ಸ್ವಲ್ಪ ಸಮಯ ಬಿಟ್ಟು ನಂತರ ನೀರು ಕುಡಿಯಬೇಕು. 

ಮಕ್ಕಳಿಗೆ ಬಟ್ಟೆ ಖರೀದಿಸುವಾಗ ಹುಷಾರ್ ! ಉಡುಪುಗಳು ವಿಷಕಾರಿ ರಾಸಾಯನಿಕ ಹೊಂದಿರುತ್ತವೆ ಎನ್ನುತ್ತದೆ ಅಧ್ಯಯನ. ಯೋಗದ ನಂತರ ಸ್ನಾನ ಮಾಡಬೇಡಿ : ಯೋಗ ಮಾಡುವುದರಿಂದ ದೇಹದ ಸಾಕಷ್ಟು ಶಕ್ತಿ ವ್ಯಯವಾಗುತ್ತದೆ. ದೇಹದ ಉಷ್ಣತೆ ಹೆಚ್ಚಾಗುತ್ತದೆ. ಆದ್ದರಿಂದ ಯೋಗಾಭ್ಯಾಸ ಮಾಡಿದ ತಕ್ಷಣ ಸ್ನಾನ ಮಾಡಬಾರದು. ಇದರಿಂದ ಶೀತ, ಜ್ವರ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಹಾಗಾಗಿ ಯೋಗದ ನಂತ್ರ ಸ್ನಾನ ಮಾಡಬೇಡಿ.

ಕಿತ್ತಳೆ ಅಥವಾ ನಿಂಬೆ, ಬೇಸಿಗೆಯಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು?

ಯೋಗದ ನಂತರ ಆಹಾರ ಸೇವನೆ ಮಾಡ್ಬೇಡಿ : ಯೋಗ ಮಾಡಿದ ತಕ್ಷಣ ಆಹಾರ ಸೇವಿಸಬಾರದು. ಯೋಗಾಭ್ಯಾಸದ ನಂತರ ಕನಿಷ್ಠ ಅರ್ಧ ಗಂಟೆಯ ನಂತರ ಆಹಾರವನ್ನು ಸೇವಿಸಿ. ಆಹಾರ ಸೇವನೆ ಮಾಡಿದ ಎರಡು ಗಂಟೆ ನಂತರ ಯೋಗಾಸನ ಮಾಡ್ಬೇಕು. ಹಾಗೆಯೇ ಯೋಗದ ನಂತ್ರ ಅರ್ಥಗಂಟೆ ಬಿಡ್ಬೇಕು. ಯೋಗಕ್ಕೆ ಮೊದಲು ಆಹಾರ ಸೇವನೆ ಮಾಡಿದ್ರೆ ಇದ್ರಿಂದ ಅಜೀರ್ಣ ಸಮಸ್ಯೆ ಕಾಡುತ್ತದೆ.   


ಅನಾರೋಗ್ಯದ ಸಮಯದಲ್ಲಿ ಯೋಗ ಮಾಡಬೇಡಿ : ನಿಯಮಿತವಾಗಿ ಯೋಗಾಭ್ಯಾಸ ಮಾಡಿದರೆ ಮಾತ್ರ ಫಲಿತಾಂಶ ಸಿಗಲು ಸಾಧ್ಯ. ಒಂದು ದಿನ ಮಾಡಿ ನಾಲ್ಕು ದಿನ ಯೋಗಾಭ್ಯಾಸ ಮಾಡದೆ ಹೋದ್ರೆ ಫಲಿತಾಂಶ ಸಿಗುವುದಿಲ್ಲ.  ಆದರೆ ನೀವು ಅನಾರೋಗ್ಯಕ್ಕೆ ಒಳಗಾಗಿದ್ದರೆ ಯೋಗ ಮಾಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಅನಾರೋಗ್ಯದ ಸಂದರ್ಭದಲ್ಲಿ ದೇಹವು ದುರ್ಬಲವಾಗಿರುತ್ತದೆ ಮತ್ತು ದಣಿದಿರುತ್ತದೆ. ಯೋಗ ಮಾಡುವುದರಿಂದ ಶಕ್ತಿ ವ್ಯಯವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಯೋಗ ಮಾಡಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರೆ ಯೋಗದ ಬಗ್ಗೆಯೂ ಮಾಹಿತಿ ಪಡೆಯಿರಿ. ಎಂದಿನಿಂದ ಯೋಗ ಮಾಡುವುದು ಸೂಕ್ತವೆಂದು ಅವರನ್ನು ಕೇಳಿ. ಅನೇಕ ಬಾರಿ ರೋಗ ಕಡಿಮೆಯಾಗಿರುತ್ತದೆ. ಆದ್ರೆ ಸುಸ್ತು ವಾರಗಟ್ಟಲೆ ಇರುತ್ತದೆ. ಆ ಸಂದರ್ಭದಲ್ಲಿ ಯಾವ ಯೋಗ ಮಾಡಬೇಕು ಎಂಬುದನ್ನು ವೈದ್ಯರಿಂದ ಕೇಳಿ ನಂತ್ರ ಯೋಗಾಭ್ಯಾಸ ಮಾಡಿ.