ಜಾರ್ಜ್​ ಫರ್ನಾಂಡಿಸ್ ಜೀವನಾಧರಿತ ಚಿತ್ರದಲ್ಲಿ ಸುಶಾಂತ್ ಸಿಂಗ್​ ನಟಿಸಬೇಕಿತ್ತು.

ಜಾರ್ಜ್​ ಫರ್ನಾಂಡಿಸ್ ಜೀವನಾಧರಿತ ಚಿತ್ರದಲ್ಲಿ ಸುಶಾಂತ್ ಸಿಂಗ್​ ನಟಿಸಬೇಕಿತ್ತು.

ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಉಲ್ಲೇಖ.

ದೇಶದ ಹೆಮ್ಮೆಯ ಪ್ರತೀಕ, ಕಾರ್ಗಿಲ್  ಯುದ್ಧದ ಸಂದರ್ಭದಲ್ಲಿ  ರಕ್ಷಣಾ ಸಚಿವ ಯುದ್ಧ ಭೂಮಿಗೆ ನೇರವಾಗಿ ಹೋಗಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ ವೀರ ಕನ್ನಡಿಗ ದಿವಂಗತ ಜಾರ್ಜ್​ ಫರ್ನಾಂಡಿಸ್. ಇವರ ಬಗ್ಗೆ ಹೇಳಲು ಶಬ್ದಗಳೇ ಸಾಲೋದಿಲ್ಲ. ಸರಳ ವ್ಯಕ್ತಿ , ಅಪ್ರತೀಮ ದೇಶ ಭಕ್ತ, ಕೇಂದ್ರ ರಕ್ಷಣಾ ಸಚಿವರಾಗಿದ್ದ ವೇಳೆ ಎಲ್ಲರು ಮುಕ್ತವಾಗಿ ಬರಬೇಕು ಎಂದು ನಿವಾಸದ ಗೇಟ್ ಅನ್ನೆ ಕಿತ್ತು ಎಸೆದ ಧಿರ ಇವರೇ. ನಮ್ಮ ಕರಾವಳಿಯ ಸಂಪರ್ಕದ ಜೀವಾಳ ಕೊಂಕಣ ರೈಲ್ವೆ. ದುರ್ಗಮ ಮಾರ್ಗದಲ್ಲೇ ರೈಲ್ವೆ ಓಡಿಸಿದ ಛಲಗಾರ. ಅಸಾಧ್ಯ ಎಂಬ ಕಲ್ಪನೆ ತೂಡೆದು ಹಾಕಿ ಕೇರಳದ ಕೊಚಿನ್​ನಿಂದ ಕರ್ನಾಟಕದ ಮಂಗಳೂರು ಕಾರವಾರ ಮಾರ್ಗ ಹಾಗೂ ಬಾಂಬೆಗೆ ಸಂಪರ್ಕ ಬೆಸೆದ ಮಹತ್ತರ ಯೋಜನೆಯ ರೂವಾರಿ ಜಾರ್ಜ್​ ಫರ್ನಾಂಡಿಸ್. ಇಂತಹ ಮೇರು ವ್ಯಕ್ತಿತ್ವ ಜಾರ್ಜ್​ ಫರ್ನಾಂಡಿಸ್ ಜೀವನಧಾರಿತ ಚಿತ್ರದಲ್ಲಿ,ಸುಶಾಂತ್ ಸಿಂಗ್​ ರಜಪೂತ್​ ಅವರು ನಟಿಸಬೇಕಿತ್ತು ಎಂಬ ಅಚ್ಚರಿಯ ಮಾಹಿತಿ ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಭಾನುವಾರ ಪ್ರಕಟವಾಗಿದೆ.
ಶಿವಸೇನೆ ಪಕ್ಷ ಮಹಾರಾಷ್ಟ್ರದಲ್ಲಿ ನಡೆಸುವ ಸಾಮ್ನಾ ಪತ್ರಿಕೆಯಲ್ಲಿ ಸದಾ ಪ್ರಸ್ತುತವಿರುವ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಈಗ ಸುಶಾಂತ್​ ಸಿಂಗ್​ ರಜಪೂತ್​ ಅವರ ಆತ್ಮಹತ್ಯೆಯ ಕುರಿತು ಲೇಖನ ಪ್ರಕಟವಾಗಿದೆ. ಅವರದು ಆತ್ಮಹತ್ಯೆನಾ ಅಥವಾ ಕೊಲೆನಾ ಎಂಬ ಹಲವು ಸಂಶಯಗಳು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿವೆ. ಇಂತಹ ಸಹಸ್ರಾರು ತಿರುವಿನ ಸಂಗತಿಯ ಸಡುವೆ ಸಾಕಷ್ಟು ಜನರು ತಮ್ಮ ತಮ್ಮ ಅಭಿಪ್ರಾಯ  ಹಂಚಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಅಧಿಕಾರ ಚುಕ್ಕಾಣಿಯಲ್ಲಿ ಇರುವ ಶಿವಸೇನೆ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ಬಿಜೆಪಿ, ಅಧಿಕಾರದ ಆಸೆಯಿಂದ ಶಿವಸೇನೆ  ಅವರ ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟಿದೆ. ಬಿಜೆಪಿ ಮುಖಂಡರಾದ ರೂಪಾ ಗಂಗೂಲಿ ಅವರು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಸಿಬಿಐ ತನಿಖೆಯಾದರೆ ಶೀಘ್ರವೇ ದೂದ್ ಕಾ ದೂದ್ ಪಾನಿ ಕಾ ಪಾನಿ ಆಗಲಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. 
ಇದಕ್ಕೆ ಶಿವಸೇನೆ ಉತ್ತರವೇನು .??
ಡಿಮಾನಿಟೈಸೇಶನ್​, ಲಾಕ್​ಡೌನ್ ನಂತಹ ಅವೈಜ್ಞಾನಿಕ ಕ್ರಮ ಕೈಗೊಂಡಿರುವ ಕೇಂದ್ರ ಬಿಜೆಪಿ ಸರ್ಕಾರದ ಕ್ರಮದಿಂದಾಗಿ ಈಗ ಆತ್ಮಹತ್ಯೆ ಅಂತಹ ನಿರ್ಧಾರಗಳು ಪ್ರವೃತಿಯಾಗಿವೆ ಎಂದು ಖಾರವಾಗಿ  ಶಿವಸೇನೆಯ ಸಂಸದ ಸಂಜಯ್​ ರಾವತ್​,  ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿದ್ದಾರೆ.ಸುಶಾಂತ್​ ಅವರು ನಿರಾಶೆ, ಮಾನಸಿಕ ಖಿನ್ನತೆ, ವೃತ್ತಿಜೀವನದಲ್ಲಿನ ವೈಫಲ್ಯದಿಂದಲೇ ತಮ್ಮ ಬಾಂದ್ರಾ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ವಿಷಯ ಬಾಲಿವುಡ್​ ಸಂಪ್ರದಾಯದಲ್ಲಿ ಹೊಸದಲ್ಲ,ಅಲ್ಲಿನ ಮಾಫಿಯಾ ಮತ್ತು ಸ್ವಜನಪಕ್ಷಪಾತವನ್ನು ಸಹ ಬಿಚ್ಚಿಟ್ಟಿದ್ದಾರೆ ರೌವತ್​. 
ದಿವಂಗತ ಬಾಳಾಸಾಹೇಬ್​ ಠಾಕ್ರೆ ಅವರ ಜೀವನಾಧರಿತ  ಚಿತ್ರದ ನಂತರ,ನಾವು ದೇಶದ ಮಾಜಿ ಕೇಂದ್ರ ರಕ್ಷಣಾ,ಸಚಿವ ಹಾಗೂ ಕನ್ನಡಿಗರಾದ ದಿವಂಗತ ಜಾರ್ಜ್​ ಫರ್ನಾಂಡಿಸ್​ ಅವರ ಜೀವನಾಧರಿತ ಚಿತ್ರಕ್ಕೆ ಅವರನ್ನು ನಟಿಸುವ ಇಂಗಿತ ವ್ಯಕ್ತಪಡಿಸಿದ್ದೆವು. ಆದರೆ ಅವರ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಸುಶಾಂತ ಸಿಂಗ್​ ಅವರ ಹೆಸರನ್ನು ಕೈ ಬಿಡಲಾಗಿತ್ತು.