ತೊಗರಿ ಖರೀದಿ ಕೇಂದ್ರ ತೆರೆಯಲು ಮನವಿ....
ತೊಗರಿ ಖರೀದಿ ಕೇಂದ್ರಗಳನ್ನು ತೆರೆಯಲು ಸ್ಪಂದಿಸಿದ ಡಿಸಿಎಂ" ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಬೆಳೆಗಾರರ ಸಂಘ ಜಂಟಿ ಹೋರಾಟ ಸಮಿತಿ, ಕುಷ್ಟಗಿವತಿಯಿಂದ ಮನವಿ ಪತ್ರದಲ್ಲಿ ರೈತರಿಗೆ ಈ ಬಾರಿಯೂ ಮುಂಗಾರು ಮಳೆ ಸರಿಯಾಗಿ ಬಾರದಿರುವುದು,ನಿಸರ್ಗ ವಿಕೂಪದಿಂದ ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬಾರದೇ ತಾಲೂಕಿನ ರೈತರು ಕಂಗಾಲಾಗಿದ್ದಾರೆ,ಸ್ವಲ್ಪ ಮಳೆ,ಅಲ್ಪ ಸ್ವಲ್ಪ ಬೆಳೆಗಳು ಬಂದರೂ, ಮಾರುಕಟ್ಟೆಯಲ್ಲಿ ಬೆಲೆ ಇರಲಾರದೆ,ರೈತರು ತುಂಬಾ ಸಂಕಷ್ಟಕ್ಕೊಳಗಾಗಿದ್ದಾರೆ.
ಕುಷ್ಟಗಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಸ್ವಲ ತೊಗರಿ ಬೆಳೆದಿದ್ದಾರೆ,ಆದರೆ ಮಾರುಕಟ್ಟೆಯಲ್ಲಿ ತೊಗರಿ ಬೆಲೆ 1 ಕ್ವಿಂಟಾಲ್ ಗೆ 3000/- ದಿಂದ 3500 ವರೆಗೆ ಇರುತ್ತದೆ. ಬೆಲೆಯು ಕುಸಿಯುತ್ತಲಿದೆ. ತೊಗರಿ ಬೆಲೆ ಕುಸಿತದಿಂದಾ ರೈತರು ತೊಂದರೆಗೆ ಒಳಗಾಗಿದ್ದಾರೆ. ಈ ಸಂಕಷ್ಟದ ದಿನಗಳಲ್ಲಿ ಸರ್ಕಾರ ರೈತರ ತೊಗರಿಯನ್ನು ಕನಿಷ್ಠ ಬೆಲೆ ರೂಪಾಯಿ 7500ಗಳಂತೆ ಖರೀದಿಸಲು ಕೂಡಲೇ ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ಎಲ್ಲಾ ತೊಗರಿ ಗಳನ್ನು ಖರೀದಿಸಿ ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕೆಂದು ವಿನಂತಿ.
ದಿನಾಂಕ 20-01-2020 ರವಳಗಾಗಿ ತೊಗರಿ ಖರೀದಿ ಕೇಂದ್ರ ತೆರೆಯದಿದ್ದರೆ ಅನಿರ್ದಿಷ್ಟ ಉಗ್ರ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ ತಾವು ಕೂಡಲೇ ಕ್ರಮ ಕೈಗೊಳ್ಳುವಿರಿ ಎಂದು ಮನವಿ ಪತ್ರವನ್ನು ಸಲ್ಲಿಸಿದರು.ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶ್ರೀ ಗೊವಿಂದ ಕಾರಜೋಳ ಉಪಮುಖ್ಯಮಂತ್ರಿಗಳು ರೈತರನ್ನು ಸಂಕಷ್ಟದಿಂದ ಪಾರುಮಾಡಬೇಕೆಂದು ಸರ್ಕಾರದ ಉದ್ದೇಶ ಹಾಗೂ ತೋಗರಿಯನ್ನು ಬೆಲೆ ರೂಪಾಯಿ 6100 ಗಳಂತೆ ಇದರಲ್ಲಿ ಕೇಂದ್ರ ಸರ್ಕಾರ 5800 ರೂಪಾಯಿ ಹಾಗೂ ರಾಜ್ಯ ಸರ್ಕಾರವು 300 ರೂಪಾಯಿ ಸೇರಿದಂತೆ ಖರೀದಿಸಲು ಕೂಡಲೇ ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದು,ಶೀಘ್ರದಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ರೈತರು ತೊಗರಿಗಳನ್ನು ಖರೀದಿಸಲು ಕೂಡಲೇ ಕ್ರಮ ಕೈಗೊಳ್ಳಲ್ಲಾವುದು.ಈ ಸಂದರ್ಭದಲ್ಲಿ ಶಾಸಕರಾದ ಅಮರೇಗೌಡ ಎಲ್ ಪಾಟೀಲ ಬಯ್ಯಾಪುರ, ಸಂಸದರು ಕರಡಿ ಸಂಗಣ್ಣ,ಎಂ.ಸಿದ್ಧೇಶ ಮುಂತಾದವರು ಉಪಸ್ಥಿತರಿದ್ದರು.
ವರದಿ : ಶರಣಪ್ಪ ಕುಂಬಾರ ತಾವರಗೇರಾ.