ಅಮೇರಿಕಾದ ಲಸಿಕಾ ಚುಚ್ಚು ಮದ್ದು ಕಾರ್ಯಕ್ರಮ ದಲ್ಲಿ ಕೊರೊನಾವೈರಸ್ ಲಸಿಕೆ ಪಡೆದ ಯುಎಸ್ ನ ಚುನಾಯಿತ ಅಧ್ಯಕ್ಷ ಜೋ ಬಿಡೆನ್

ನ್ಯೂಯಾರ್ಕ್: ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಕೋವಿಡ್ -19 ಲಸಿಕೆಯ ಮೊದಲ ಚುಚ್ಚುಮದ್ದಿನ ಡೋಸೇಜ್ ಅನ್ನು ಸೋಮವಾರ ಸುದ್ದಿ ಮಾದ್ಯಮದ ಮುಂದೆ ಪಡೆದರು.

315,000 ಕ್ಕೂ ಹೆಚ್ಚು ಅಮೆರಿಕನ್ನರನ್ನು ಸಾಯಿಸಿ ಮರಣ ಮೃದಂಗ ಬಾರಿಸಿದ ಕೋವಿಡ್ 19 ಗೆ 17.5 ಮಿಲಿಯನ್ಗಿಂತಲೂ ಹೆಚ್ಚು ಸೋಂಕಿಗೆ ಒಳಗಾಗಿದ್ದಾರೆ ಹಾಗಾಗಿ  ನಾವೆಲ್ಲರೂ ಕರೋನ ವೈರಸ್ ವಿರುದ್ಧ ಹೋರಾಡುವುದಾಗಿ ಬಿಡೆನ್ ಹೇಳಿದ್ದಾರೆ.

 ಜನವರಿ 20 ರಂದು ಚುನಾಯಿತರಾಗಿ ಅಧಿಕಾರ ವಹಿಸಿಕೊಳ್ಳುವಾಗ  ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಅವರ ಮೊದಲ ಆದ್ಯತೆಯಾಗಿದೆ ಹಾಗೂ 78ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ರೋಗವು ವೇಗವಾಗಿ ಹರಡುತ್ತದೆ ಎಂದು ಜೋ ಬಿಡೆನ್ ಮಾದ್ಯಮದ ಎದುರು ತಿಳಿಸಿದರು.

ಜೋ ಬಿಡೆನ್ ಲಸಿಕೆಯನ್ನು ನೂರಾರು ಮಿಲಿಯನ್ ಅಮೆರಿಕನ್ನರಿಗೆ ವಿತರಿಸುವ ವ್ಯವಸ್ಥಾಪಕ ಸವಾಲುಗಳನ್ನು ಹೊತ್ತುಕೊಂಡಿರುವುದಲ್ಲದೆ  ಕೋವಿಡ್ ಬಗ್ಗೆ ಚಿಂತಾಜನಕರಾಗಿರುವ  ಜನರ ಮನವೊಲಿಸಲುವಲ್ಲಿಯೂ ಸಹ ಜೋ ಬಿಡೆನ್  ಯಶಸ್ವಿಯಾಗಿದ್ದಾರೆ.  ರಾಜಕೀಯ ಕಾರಣಗಳಿಂದಾಗಿ ಒಂದು ಸಾಹಸಕ್ಕೆ  ಮುಂದಾಗಿದ್ದಾರೆ ಎಂದು ಹೇಳಬಹುದಾಗಿದೆ. 

 

ವರದಿ : ಸಂಜಯ್.ಕೊಳ್ಳಿ

ಆಲ್ಮಾನ್ಯೂಸ್‌24 ಬೆಂಗಳೂರು