ಭಾರತದಲ್ಲಿ ಪ್ಯಾರಾಸಿಟಮಲ್ ಮೆಡಿಕಲ್ ಬೆಲೆ ಏರಿಕೆ ......!!
ಈಗಾಗಲೇ ಕರೋನಾ ವೈರಸ್ ಕಾರಣದಿಂದ ಚೀನಾದಲ್ಲಿ 1800 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ .ಸುಮಾರು ಎಂಬತ್ತು ಸಾವಿರ ಜನ ಕರೋನಾ ವೈರಸ್ ಸೋಂಕಿತರಾಗಿದ್ದು ಅವನನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ .ಈ ನಡುವೆ ಕರೋನಾ ದೆಸೆಯಿಂದ ಚೀನಾದ ಫಾರ್ಮ್ ಫಾರ್ಮ ಕಂಪನಿಗಳ ಉತ್ಪಾದನೆ ಸ್ಥಗಿತಗೊಳಿಸಿದೆ .
ಚೀನಾದಲ್ಲಿ ಉತ್ಪಾದನೆ ಕುಂಠಿತವಾಗಿರುವ ಪರಿಣಾಮ ಭಾರತದ ಅತ್ಯಂತ ಪ್ರಿಯವಾದ ಔಷಧಿ ಪ್ಯಾರಾಸಿಟಮಲ್ ಬೆಲೆ ಏರಿಕೆಯಾಗಿದೆ .ಭಾರತದಲ್ಲಿ ಈ ನೋವು ನಿವಾರಕ ಮಾತ್ರೆ ಬೆಲೆ ಶೇ 40 ರಷ್ಟು ಏರಿಕೆಯಾಗಿರುವುದು ಸುದ್ದಿ ಬಂದಿದೆ .
ಜೈಡಸ್ ಕಾಡಿಲ್ಲಾ ಚೇರ್ಮನ್ ಪಂಕಜ್ ಆರ್ ಪಟೇಲ್ ಅವರ ಪ್ರಕಾರ, ಚೀನಾದಿಂದ ಔಷಧ, ಮಾತ್ರೆ ಪೂರೈಕೆ ಸ್ಥಗಿತವಾಗಿದ್ದು, ಆಂಟಿಬಯೋಟಿಕ್, ಅಜಿಥ್ರೋಮೈಸಿನ್ ಮುಂತಾದ ಬ್ಯಾಕ್ಟೀರಿಯಾ ಸೋಂಕು ನಿವಾರಕ ಮಾತ್ರೆಗಳ ಬೆಲೆ ಶೇ 70ರಷ್ಟು ಏರಿಕೆ ಕಂಡಿದೆ.