ಅವತ್ತು ಶೂಟಿಂಗ್ ನಿಲ್ಸಿ ಮಾತಾಡಿದ್ರೆ ನನ್ ತಂಗಿ ಸಾಯ್ತಿರಲಿಲ್ಲ...
ಸ್ಯಾಂಡಲ್ ವುಡ್ ಅದೊಂದ್ ಥರಾ ಮಾಯಾ ಬಜಾರು.ಇಲ್ಲಿ ಸ್ಟಾರ್ ಆಗಬೇಕು, ಡೈರೆಕ್ಟರ್ ಆಗಬೇಕು ಅಂತಾ ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ನೂರಾರು ಜನ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಸುತ್ತುತ್ತಿರುತ್ತಾರೆ. ಆದರೆ ಇಲ್ಲಿ ನೆಲೆ ಕಂಡುಕೊಳ್ಳುವುದು ಮಾತ್ರ ಬೆರಳಣಿಕೆ ಜನರಷ್ಟು ಮಾತ್ರ. ಅದಕ್ಕೆ ಕಾರಣಗಳು ನೂರಾರು. ಅದೇ ರೀತಿಯಾಗಿ ಸಾಕಷ್ಟು ವರ್ಷ ಇಂಡಸ್ಟ್ರಿಯಲ್ಲಿದ್ದರೂ ಒಂದೊಳ್ಳೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ನಟ ಕಮ್ ನಿರ್ದೇಶಕ ರವಿತೇಜ ಸ್ಯಾಂಡಲ್ ವುಡ್ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
"ಇಂಡಸ್ಟ್ರಿ ಬಿಟ್ಟು ಬೇರೆ ಕೆಲಸ ಗೋತ್ತಿಲ್ಲ ನನಗೆ...."
ರವಿತೇಜ ನಿರ್ದೇಶನದ ಸಾಗುತ ದೂರ ದೂರ ಸಿನಿಮಾ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಗೌರೀಶ್ ಅಕ್ಕಿ ಸ್ಟುಡಿಯೋ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಚಂದನವನದ ಕುರಿತು ತಮ್ಮ ಬೇಸರ ಹೊರಹಾಕಿದ್ದಾರೆ.
" ನಾನು ಸ್ಯಾಂಡಲ್ ವುಡ್ ಗೆ ನಟನಾಗಿ ಎಂಟ್ರಿಯಾಗಿದ್ದರು,ನನ್ನ ಪ್ಯಾಶನ್ ಮಾತ್ರ ಡೈರೆಕ್ಷನ್. ಒಳ್ಳೇ ಕಥೆಗಳನ್ನು ನಿರ್ದೇಶನ ಮಾಡಬೇಕು. ಉತ್ತಮ ಚಿತ್ರಗಳನ್ನು ಇಂಡಸ್ಟ್ರೀಗೆ ಕೊಡುಗೆಯಾಗಿ ನೀಡಬೇಕು ಎಂಬ ಆಸೆಯೊಂದಿಗೆ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ಆದರೆ ಹೊಸಬರ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಮಾಪಕರು ಮುಂದೆ ಬರುವುದಿಲ್ಲ. ಕೆಲವೊಮ್ಮೇ ಚಿತ್ರರಂಗವನ್ನೇ ಬಿಟ್ಟು ಹೋಗೋಣ ಅನ್ಸುತ್ತೆ. ಆದರೆ ನನಗೆ ಇಂಡಸ್ಟ್ರಿ ಬಿಟ್ಟು ಬೇರೆ ಕೆಲ್ಸ ಗೊತ್ತಿಲ್ಲ. ಬೇರೆ ಕಡೆ ಹೋಗಿ ಬದುಕೊಕು ನನಗೆ ಬರುವುದಿಲ್ಲ " ಎಂದು ಹೇಳಿದರು.
"ಅವತ್ತು ಶೂಟಿಂಗ್ ನಿಲ್ಸಿ ಮಾತಾಡಿದ್ರೆ ನನ್ ತಂಗಿ ಸಾಯ್ತಿರಲಿಲ್ಲ..."
ಅವತ್ತು ನಾನು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೆ. ನನ್ನ ತಂಗಿ ಫೋನ್ ಮಾಡಿ ಅಣ್ಣಾ ನಿನ್ನ ಜೊತೆ ತುಂಬಾ ಮಾತಾಡಬೇಕು ಫ್ರೀ ಇದ್ದೀಯಾ ಎಂದು ಕೇಳಿದಳು.ನಾನು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ಡಿನಿ.ನಾಳೆ ಫೋನ್ ಮಾಡ್ತಿನಿ ಎಂದು ಹೇಳಿ ಕಾಲ್ ಕಟ್ ಮಾಡಿದೆ. ಆದರೆ ಆ ನನ್ನ ನಿರ್ಧಾರಕ್ಕೆ ನಾನು ದೊಡ್ಡ ಬೆಲೆ ತೆರಬೆಕಾಯ್ತು. ಮರುದಿನ ಬೆಳಿಗ್ಗೇ ಬಂದ ಫೋನ್ ನಲ್ಲಿ ಆಘಾಕಾರಿ ಸುದ್ದಿಯೊಂದು ಕಾದಿತ್ತು.ಅದು ನನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ. ಬಹುಶಃ ನಾನು ಅವತ್ತು ನನ್ನ ಶೂಟಿಂಗ್ ನಿಲ್ಸಿ ನನ್ನ ತಂಗಿಯನ್ನು ಕಳೆದುಕೋಳ್ಳುತ್ತಿರಲಿಲ್ಲ ಎಂದು ಸಾಗುತ ದೂರ ದೂರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರವಿ ತೇಜ ತಮ್ಮ ಬದುಕಿನ ಕಹಿ ಘಟನೆಯನ್ನು ನೆನೆಪಿಸಿಕೊಂಡರು.
ಇನ್ನು "ಸಾಗುತ ದೂರ ದೂರ" ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು, ಸದ್ಯಕ್ಕೆ ಥಿಯೇಟರ್ ಸಮಸ್ಯೆ ಎದುರಿಸುತ್ತಿದೆ. ಕಳೆದ ವಾರ ಕನ್ನಡದಲ್ಲೇ ಹದಿಮೂರು ಸಿನಿಮಾಗಳು ಬಿಡುಗಡೆಯಾಗಿದ್ದು,ಪ್ರೇಕ್ಷಕರಿಗೆ ಯಾವ ಸಿನಿಮಾಗಳನ್ನು ವಿಕ್ಷಿಸಬೇಕು ಎನ್ನುವ ಗೊಂದಲ ಮೂಡುವೂದರ ಜೊತೆಗೆ ಥಿಯೇಟರ್ ಕೊರತೆ ಸಹ ಉಂಟಾಗುತ್ತಿದೆ.ಈ ರೀತಿಯ ಸಮಸ್ಯೆಗಳು ಕನ್ನಡ ಚಿತ್ರರಂಗದ ಬೆಳವಣಿಗೆ ದೃಷ್ಠಿಯಿಂದ ನಿಜಕ್ಕೂ ಸವಾಲು..