ದೀಪ ಹಚ್ಚಿ....ಹಾಗಂತ ದೀಪಾವಳಿ ಮಾಡಬೇಡಿ... ಸಾಮಾಜಿಕ ಅಂತರ ಮರೆಯದಿರಿ...
ಇಂದು ಇಡಿ ಭಾರತ ಪ್ರಧಾನಿ ಮೋದಿ ಕರೆಯ ಮೇರೆಗೆ ರಾತ್ರಿ 9 ಗಂಟೆಗೆ ದೀಪ ಬೆಳಗಲು ಸಿದ್ಧವಾಗುತ್ತಿದೆ. ಕೊರೊನಾ ವಿರುದ್ಧ 130 ಕೋಟಿ ಭಾರತೀಯರ ಒಗ್ಗಟ್ಟಿನ ಹೊರಾಟದ ಸಂಕೇತವಾಗಿ ದೀಪ ಬೆಳಗಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿನ ಎಲ್ಲಾ ವಿದ್ಯುತ್ ದೀಪ ಆರಿಸಿ 9 ನಿಮಿಷಗಳ ಕಾಲ ದೀಪ ಬೆಳಗುವಂತೆ ಹೇಳಿದ್ದಾರೆ.ಕಣ್ಣಿಗೆ ಕಾಣದ ಕೊರೊನಾ ವಿರುಧ್ಧ ಬೆಳಕಿನ ಸಮರಕ್ಕೆ ಭಾರತ ಸನ್ನಧ್ಧವಾಗಿದೆ.ದೀಪ ಬೆಳಗಿಸುವ ಮೂಲಕ ಮಹಾಮಾರಿಯ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಲಿದೆ.ಇದು ಕೊರಾನಾದಿಂದ ದೇಶದಲ್ಲಿ ಆವರಿಸಿರುವ ನಿರಾಶೆಯ ಕತ್ತಲನ್ನು ದೀಪದ ಬೆಳಕಿನಿಂದ ಹೋಗಲಾಡಿಸುವ ಪ್ರಯತ್ನ. ಈ ಮೂಲಕ ದೇಶದ ಜನರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸವನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ.
ಆದರೆ ಈ ಸಮಯದಲ್ಲಿ ಎಲ್ಲರೂ ಗಮನವಿಡಬೇಕಾದ ಅಂಶ ಸಾಮಾಜಿಕ ಅಂತರ. ಪ್ರಧಾನಿ ಕರೆಯ ಮೇರೆಗೆ ದೀಪ ಬೆಳಗಿಸುವುದೇನೋ ಸರಿ..ಹಾಗಂತ ಯಾರು ಗುಂಪು ಸೇರಿ ದೀಪ ಹಚ್ಚಬೇಕಿಲ್ಲ...ದೀಪೋತ್ಸವ ಮಾಡಬೇಕಿಲ್ಲ.... ಮನೆಯಿಂದ ಹೊರಬಂದು ದೀಪಾವಳಿ ಆಚರಿಸಬೇಕಿಲ್ಲ.
ಎಲ್ಲರೂ ತಮ್ಮ ಮನೆಯ ಬಾಗಿಲಲ್ಲಿ ಅಥವಾ ಬಾಲ್ಕಾನಿಯಲ್ಲಿ ನಿಂತು ದೀಪ ಬೆಳಗಿಸಿ. ದೀಪ ಹಚ್ಚುವ ಭರದಲ್ಲಿ ಸಾಮಾಜಿಕ ಅಂತರದ ಮೂಲ ಉದ್ದೇಶವನ್ನು ಯಾರು ಮರೆಯಬೇಡಿ.
ಕಳೆದ ಬಾರಿ ಜನತಾ ಕರ್ಫ್ಯೂ ಸಮಯದಲ್ಲಿ ಚಪ್ಪಾಳೆ ತಟ್ಟಲು ಹೇಳಿದ್ದಾಗ ಜನ ಗುಂಪು ಸೇರಿ ಜನತಾ ಕರ್ಫ್ಯೂ ವಿನ ಮೂಲ ಉದ್ದೇಶವನ್ನೇ ಮರೆತಿದ್ದರು. ಈ ಸಾರಿ ಅಂತಹ ತಪ್ಪು ಆಗೋದು ಬೇಡ. ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮನೆಯ ಬಾಗಿಲು ಅಥವಾ ಬಾಲ್ಕನಿಯಲ್ಲಿ ದೀಪ ಬೆಳಗಿಸಿ.
ವಿದ್ಯುತ್ ದೀಪ ಮಾತ್ರ ಆರಿಸಿ.....
ಇನ್ನು ದೀಪ ಬೆಳಗಿಸುವ ಸಮಯದಲ್ಲಿ ಪ್ರಧಾನಿ ಮೋದಿ ವಿದ್ಯುತ್ ದೀಪ ಆರಿಸುವಂತೆ ಹೇಳಿದ್ದು , ಎಲ್ಲರೂ ವಿದ್ಯುತ್ ದೀಪ ಮಾತ್ರ ಆರಿಸಿ.ಮನೆಯಲ್ಲಿನ ಬೇರೆ ಉಪಕರಣಗಳನ್ನು ಆರಿಸೋದು ಅಥವಾ ಮನೆಯ ಮೇನ್ ಸ್ವಿಚ್ ಆಫ್ ಮಾಡೋದು ಬೇಡ. ಒಂದು ವೇಳೆ ಮೇನ್ ಸ್ವಿಚ್ ಆಫ್ ಮಾಡಿದರೆ ಅಷ್ಟು ವಿದ್ಯುತ್ ವಾಪಸ್ ಗ್ರಿಡ್ ಗೇ ಹೋಗಿ ತಾಂತ್ರಿಕ ಸಮಸ್ಯೆ ಉಂಟಾಗುವ ಸಂಭವ ಇದೆ. ಆದ್ದರಿಂದ ದೀಪ ಬೆಳಗಿಸುವ ಸಮಯದಲ್ಲಿ ವಿದ್ಯುತ್ ದೀಪ ಹೊರತುಪಡಿಸಿ ಬೇರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಆರಿಸಬೇಡಿ.