ಮನೆಯಲ್ಲಿ ಸಂಗ್ರಹಿಸಿಟ್ಟ ಸಿಲಿಂಡರ್ ಸ್ಫೋಟ: ಲಕ್ಷಾಂತರ ರೂ. ಹಾನಿ

ಕಾರವಾರ: ಮನೆಯೊಂದರಲ್ಲಿ ಸಂಗ್ರಹ ಮಾಡಿಟ್ಟಿದ್ದ ಸಿಲಿಂಡರ್ ಗಳು ಏಕಾಏಕಿ ಸ್ಫೋಟಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ತಾರಮಕ್ಕಿ ಎನ್ನುವಲ್ಲಿ ಮಂಗಳವಾರ ತಡ ರಾತ್ರಿ ಸಂಭವಿಸಿದೆ.

ಗೋಕರ್ಣದ ನಾಗರಾಜ್ ಎನ್ನುವರ ಮನೆಯಲ್ಲಿ ಈ ಘಟನೆ ನಡೆದಿದೆ. ಈ ಅವಘಡಕ್ಕೆ ನಿಖರ ಮಾಹಿತಿ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಾಗರಾಜ ಅವರ ಮನೆಯಲ್ಲಿ ಸುಮಾರು ಏಳು ಸಿಲಿಂಡರ್ ಸಂಗ್ರಹವಿತ್ತು. ಅವುಗಳಲ್ಲಿ ಐದು ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ಫೋಟ ತೀರ್ವತೆಗೆ ಮನೆಗೆ ಭಾಗಶಃ ಹಾನಿಯಾಗಿದ್ದು ಲಕ್ಷಾಂತರ ರೂ. ಹಾನಿಯಾಗಿದೆ.

 

ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಹರಸಾಹಸ ಪಟ್ಟು ಬೆಂಕಿಯ ಜ್ವಾಲೆ ಆರಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ