ಮಂಗಳೂರು ಗಲಭೆಯಲ್ಲಿ ಪೋಲೀಸರ ಗುಂಡೇಟಿಗೆ ಸಾವನ್ನಪ್ಪಿದ್ದವರಿಗೆ ಕೊಟ್ಟ ಪರಿಹಾರಕ್ಕೆ ತಡೆ....ಸಿ.ಎಂ. ಬಿಎಸ್ ವೈ.
ಪೌರತ್ವ ತಿದ್ದುಪಡಿ ಕಾಯಿದೆ ವಿರೊಧಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆದು, ಕೊನೆಗೆ ಪ್ರತಿಭಟನೆ ಹಿಂಸಾಚಾರದ ರೂಪ ತಳೆದು, ಕಲ್ಲು ತೂರಾಟದವರೆಗೂ ಬಂದು
ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾಗಿತ್ತು.
ಈಶಾನ್ಯ ರಾಜ್ಯದಿಂದ ಶುರುವಾದ ಪ್ರತಿಭಟನೆ ಕರ್ನಾಟಕಕ್ಕೂ ಕಾಲಿಟ್ಟು ಮಂಗಳೂರಿನಲ್ಲಿ
ಇತ್ತೀಚೆಗೆ ನಡೆದ ಪೊಲೀಸರ ಗೋಲಿಬಾರ್ ಘಟನೆಯಲ್ಲಿ ಇಬ್ಬರು ಮೃತ ಪಟ್ಟಿದ್ದರು.
ಇನ್ನು ರಾಜ್ಯ ಸರ್ಕಾರ ಮೃತರ ಕುಟುಂಬಗಳಿಗೆ ಪರಿಹಾರವನ್ನು ಘೋಷಿಸಿತ್ತು. ಆದರೆ ಈ ಪರಿಹಾರದ ಮೊತ್ತಕ್ಕೆ ಸದ್ಯ ರಾಜ್ಯ ಸರ್ಕಾರ ತಡೆ ನೀಡಿದೆ.
ಇನ್ನು ಈ ಸಂಭಂಧ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಎಂ.ಯಡಿಯೂರಪ್ಪ ,ಮೃತರು ಗಲಭೆಯಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಅವರ ಪರಿಹಾರ ಮೊತ್ತವನ್ನು ವಾಪಸ್ ಪಡೆಯಲಾಗುವುದು.
ಮಂಗಳೂರು ಗೋಲಿಬಾರ್ ಪ್ರಕರಣವನ್ನು ಸಿಐಡಿ ಮತ್ತು ನ್ಯಾಯಾಂಗ ಪ್ರತ್ಯೇಕ ತನಿಖೆಗೆ ಒಪ್ಪಿಸಲಾಗಿದೆ. ತನಿಖೆಯಲ್ಲಿ ಮೃತಪಟ್ಟವನ್ನು ಅಪರಾಧಿಗಳೆಂದು ಸಾಬೀತಾದರೆ ಅವರಿಗೆ ಪರಿಹಾರ ನೀಡುವುದು ಅಕ್ಷಮ್ಯ ಅಪರಾಧವಾಗುತ್ತದೆ. ಹೀಗಾಗಿ ಸದ್ಯಕ್ಕೆ ಪರಿಹಾರ ಮೊತ್ತವನ್ನು ಅವರ ಕುಟುಂಬಕ್ಕೆ ನೀಡುವುದಿಲ್ಲ. ತನಿಖೆ ಮುಗಿಯುವವರೆಗೂ 1 ರೂಪಾಯಿ ಕೂಡ ಕೊಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.