ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ -ಸಚಿವ ನಾಗೇಶ್
ಇನ್ಮುಂದೆ ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯ - ಸಚಿವ ನಾಗೇಶ್
ಮನೆಬಾಗಿಲಿಗೆ ಮದ್ಯ ಹೋಮ್ ಡೆಲಿವರಿ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ಅಬಕಾರಿ ಸಚಿವ ನಾಗೇಶ್
ಈಗ ಮತ್ತೊಂದು ವಿವಾದಕ್ಕೆ ಗುರಿಯಾಗ್ತಿದ್ದಾರೆ.
ಬಡವರಿಗೆ ಸಬ್ಸಿಡಿ ದರದಲ್ಲಿ ಮದ್ಯವನ್ನು ಕೊಡಲು ಸರ್ಕಾರ ಚಿಂತಿಸಿದೆ ಎಂದು ಹೇಳಿದ್ದಾರೆ.
ವಿಕಾಸ ಸೌಧದಲ್ಲಿ ಮಾತನಾಡಿದ ಸಚಿವರು ಬಡಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನ ಸಬ್ಸಿಡಿ ದರದಲ್ಲಿ ಕೊಡಬೇಕಂದುಸರ್ಕಾರದ ಚಿಂತನೆ ಇದೆ.ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಸರಬರಾಜು ಮಾಡುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಇದು ಇವರ ವೈಯುಕ್ತಿಕ ಹೇಳಿಕೆಯೋ ಅಥವಾ ಸರ್ಕಾರದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆನಾ ಎನ್ನುವುದು ಸ್ಪಷ್ಟತೆ ಇಲ್ಲ.
ಹಿಂದೆ ನಾಗೇಶ್ ಹೋಮ್ ಡೆಲಿವರಿ ಹೇಳಿಕೆ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿತ್ತು ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ಮಧ್ಯಪ್ರವೇಶಿಸಿ ಹೋಮ್ ಡೆಲಿವರಿ ಚಿಂತನೆ ಇಲ್ಲ ಎಂದು ವಿವಾದಕ್ಕೆ ತೆರೆ ಎಳೆದಿದ್ದರು.
ಈಗ ಮತ್ತೆ ಸಬ್ಸಿಡಿ ದರದಲ್ಲಿ ಮದ್ಯ ನೀಡುತ್ತೇವೆ ಎಂಬ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ನಾಗೇಶ್ ಚಿಂತನೆಗೆ ಓಕೆ ಅಂತಾರ ..? ತಿರಸ್ಕರಿಸುತ್ತಾರ ..?
ಎನ್ನುವುದು ಕಾದುನೋಡಬೇಕಿದೆ.