ಕಲುಬುರುಗಿಯ ಮೃತ ವೃದ್ಧನ ಕುಟುಂಬದ ಸದಸ್ಯರೊಬ್ಬರಿಗೆ ಕೊರೋನಾ ಇರುವುದು ದೃಢ: ತುರ್ತು ಸಭೆ ಕರೆದ ಸಚಿವ ಸುಧಾಕರ್
ಕೊರೋನಾ ವೈರಸ್ನಿಂದ ಮೃತಪಟ್ಟ ಕಲಬುರಗಿಯ ವಯೋವೃದ್ಧನ ಕುಟುಂಬದ ಮತ್ತೋರ್ವ ಸದಸ್ಯರಿಗೆ ಸೋಂಕು ಇರುವುದು ದೃಢಪಟ್ಟ ಕಾರಣ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತುರ್ತು ಸಭೆ ಕರೆದಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸುಧಾಕರ್ ಮಹತ್ವದ ಸಭೆ ನಡೆಸಲಿದ್ದಾರೆ. ಕೊರೋನಾ ವೈರಸ್ ಕುರಿತಾಗಿ ಪರಿಶೀಲನಾ ಸಭೆ ನಡೆಯಲಿದ್ದು, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕೆಲವು ನಿರ್ದೇಶನಗಳನ್ನು ಸುಧಾಕರ್ ನೀಡಲಿದ್ದಾರೆ ಎನ್ನಲಾಗುತ್ತಿದೆ.
ಇಂದು ಕೊರೋನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದ ಕಲಬುರಗಿಯ ವಯೋವೃದ್ಧನ ಕುಟುಂಬದ 4ನೇ ಸದಸ್ಯನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 45 ವರ್ಷದ ವ್ಯಕ್ತಿಯ ಗಂಟಲು ದ್ರವ್ಯ ಮಾದರಿಯ ವರದಿ 'ಪಾಸಿಟಿವ್' ಎಂದು ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್. ಬಿ ತಿಳಿಸಿದಿದ್ದಾರೆ.