ಕೊರೊನಾ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ ಗೊತ್ತಾ..? ಈ ಸ್ಟೋರಿ ನೋಡಿ.
ಕೊರೊನಾ...ಸದ್ಯಕ್ಕೆ ಈ ಹೆಸರು ಕೇಳಿದರೆ ಸಾಕು ಇಡಿ ವಿಶ್ವವೇ ಬೆಚ್ಚಿ ಬೀಳುತ್ತಿದೆ.ಇದಕ್ಕೆ ಕಾರಣ ಜಗತ್ತಿನಲ್ಲಿ ಕೊರೊನಾ ಸೃಷ್ಟಿಸಿರುವ ಭೀತಿ ಹಾಗೂ ಉಂಟುಮಾಡಿರುವ ಅನಾಹುತ. ಈ ಮಹಾಮಾರಿ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸೊಂಕಿತರ ಸಂಖ್ಯೆ 3000 ದಾಟಿದೆ. ಇನ್ನು ಈ ಕೊರೊನಾ ಸೊಂಕಿತರ ಚಿಕಿತ್ಸೆಗೆ ಎಷ್ಟು ಹಣ ಬೇಕಾಗುತ್ತದೆ ಅಂತಾ ಎಲ್ರಿಗೂ ಕುತೂಹಲ ಇದ್ದೇ ಇರುತ್ತೆ.ಹಾಗಾದ್ರೆ ಕೊರೊನಾ ಚಿಕಿತ್ಸೆಗೆ ಎಷ್ಟು ಹಣ ಬೇಕು..ರೋಗಿಯ ಚಿಕಿತ್ಸಾ ವೆಚ್ಚ ಯಾರು ಭರಿಸುತ್ತಾರೆ ಎನ್ನುವುದರ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿ....
ಕೊರೊನಾವೈರಸ್ ನಿಂದ ಅತಿ ಹೆಚ್ಚು ಭಾದಿತ ರಾಜ್ಯಗಳಲ್ಲಿ ಕೇರಳವೂ ಒಂದು.ಇದೀಗ ಕೇರಳ ರಾಜ್ಯದಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗೆ ತಗಲುವ ವೆಚ್ಚದ ಮಾಹಿತಿ ಹೊರಬಿದ್ದಿದೆ. ಮೂಲಗಳ ಪ್ರಕಾರ ಐಸೋಲೇಷನ್ ನಲ್ಲಿರುವ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದರೆ ಆತನ ಚಿಕಿತ್ಸೆಗೆ ಅಂದಾಜು 20,000 ದಿಂದ 25,000 ರೂ ವೆಚ್ಚ ತಗಲುತ್ತದೆ. ಇನ್ನು ಕೊರೊನಾ ರೋಗಿಗೆ ಐಸಿಯು ನಲ್ಲಿ ಚಿಕಿತ್ಸೆ ನೀಡಿದರೆ ಖರ್ಚು 50,000 ರೂಪಾಯಿಯನ್ನು ದಾಟುತ್ತದೆ.
ಕೊರೊನಾ ಶಂಕಿತರ ಪರೀಕ್ಷೆಗೆ ಸುಮಾರು 5000 ರೂ ಖರ್ಚಾಗುತ್ತದೆ. ಟೆಸ್ಟಿಂಗ್ ಕಿಟ್ ನ ಬೆಲೆಯೇ 3000 ರೂ ಇದೆ. ಇದರ ಜೊತೆಗೆ ಕೊರೊನಾ ರೋಗಕ್ಕೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪರ್ಸನಲ್ ಪ್ರೊಟೆಕ್ಟಿವ್ ಇಕ್ಯುಪಮೆಂಟ್ ( ಪಿಪಿಇ ) ಗಳ ಅವಶ್ಯಕತೆ ಇದ್ದು ಅವುಗಳಿಗೂ ಸಾವಿರಾರು ರೂಪಾಯಿ ಖರ್ಚಾಗುತ್ತದೆ.
ಕೊರೊನಾಸೊಂಕಿತರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರಗಳೇ ಭರಿಸುತ್ತಿವೆ. ಶಂಕಿತ ವ್ಯಕ್ತಿಗಳ ಪರಿಕ್ಷೇ , ಐಸೋಲೇಷನ್, ಚಿಕಿತ್ಸೆ ಎಲ್ಲದಕ್ಕೂ ಸರ್ಕಾರಗಳು ಹಣ ನೀಡುತ್ತೀವೆ. ಕೊರೊನಾ ಸಂಕಷ್ಟವನ್ನು ಎದುರಿಸಲು ಕೇಂದ್ರ ಈಗಾಗಲೇ ಸಾಕಷ್ಟು ಹಣವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಿದೆ.