ಭಾನುವಾರ ವಿದ್ಯುತ್ ಆರಿಸಿ ದೀಪ ಬೆಳಗಿಸುವಂತೆ ಮೋದಿ ಕರೆ : ದೇಶಾದ್ಯಂತ ಒಮ್ಮೆಲೆ ವಿದ್ಯುತ್ ಆರಿಸಿದರೆ ತೊಂದರೆಯಾಗುತ್ತಾ...?
ಕೊರೊನಾ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ಮೋದಿ ಏಪ್ರಿಲ್ 5 ರ ರಾತ್ರಿ
9 ಗಂಟೆಗೆ ಮನೆಯಲ್ಲಿನ ವಿದ್ಯುತ್ ಆರಿಸಿ 9 ನಿಮಿಷಗಳ ಕಾಲ ದೀಪ/ ಮೇಣದ ಬತ್ತಿ / ಮೊಬೈಲ್ ಟಾರ್ಚ್ ಬೆಳಗಿಸುವಂತೆ ಕರೆ ನೀಡಿದ್ದರು.
ಆದರೆ ಮೋದಿಯವರ ಈ ನಿರ್ಧಾರಕ್ಕೆ ದೇಶಾದ್ಯಂತ ಪರ ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿವೆ. ದೇಶದೆಲ್ಲೆಡೆ ಒಮ್ಮೆಲೆ ವಿದ್ಯುತ್ ಆರಿಸಿದರೆ ತಾಂತ್ರಿಕ ತೊಂದರೆಯಾಗಬಹುದು ಎಂದು ವಿರೋಧ ಪಕ್ಷಗಳು ಸೇರಿದಂತೆ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ದೇಶಾದ್ಯಂತ ಒಟ್ಟು 150 ಗಿಗಾವ್ಯಾಟ್ ವಿದ್ಯುತ್ ಗೆ ಬೇಡಿಕೆ ಇದ್ದು, ಒಮ್ಮೆಲೆ ವಿದ್ಯುತ್ ಆರಿಸಿದರೆ ಅಷ್ಟೂ ಪ್ರಮಾಣದ ವಿದ್ಯುತ್ ವಾಪಸ್ ಪವರ್ ಗ್ರಿಡ್ ಗೆ ಹೋಗುತ್ತದೆ. ಇಷ್ಟು ಪ್ರಮಾಣದ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಗ್ರಿಡ್ ಗೆ ಇರದೇ ಇದ್ದಾಗ ತಾಂತ್ರಿಕ ಸಮಸ್ಯೆ ಉಂಟಾಗುವ ಸಂಭವ ಇರುತ್ತದೆ.
ಅಧಿಕಾರಿಗಳು ಹೇಳೋದೇನು....?
ಇನ್ನು ಕೇಂದ್ರದ ಅಧಿಕಾರಿಗಳು ವಿದ್ಯುತ್ ಆಫ್ ಮಾಡುವುದರಿಂದ ಯಾವುದೇ ಸಮಸ್ಯೆ ಆಗಲ್ಲ ಎಂದಿದ್ದಾರೆ.ಮನೆಯಲ್ಲಿನ ವಿದ್ಯುತ್ ದೀಪಗಳನ್ನು ಮಾತ್ರ ಆರಿಸಿ. ಬೇರೆ ಉಪಕರಣಗಳನ್ನು ಆರಿಸಬೇಡಿ.ಹಾಗಾದಾಗ ಯಾವುದೇ ಸಮಸ್ಯೆ ಆಗಲ್ಲ
ಮತ್ತು ವಿದ್ಯುತ್ ಪ್ರಸರಣದಲ್ಲಿ ಯಾವುದೇ
ತೊಂದರೆಯುಂಟಾಗುವುದಿಲ್ಲ ಎಂದು ಹೇಳಿದ್ದಾರೆ.