ಧಾರಾವಿ ಕೊಳೆಗೇರಿಯನ್ನೂ ಬಿಡದ ಕೊರೋನಾ...! ಆಗೇ ಬಿಟ್ಟಿದೆ ಮೊದಲ ಬಲಿ...!
ಮುಂಬೈನ ಧಾರಾವಿಯಲ್ಲಿ ಎರಡು ಕೋವಿಡ್–19 ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಸೋಂಕಿನ ಲಕ್ಷಣ ಹೊಂದಿದ್ದ ಇಲ್ಲಿನ 46 ವರ್ಷದ ನಿವಾಸಿಯೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಗುರುವಾರ ಬೆಳಿಗ್ಗೆ ಮತ್ತೊಬ್ಬ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 52 ವರ್ಷದ ಈ ಮಹಿಳೆ ಬೃಹನ್ ಮುಂಬೈ ನಗರಪಾಲಿಕೆ ಉದ್ಯೋಗಿ. ಈ ಇಬ್ಬರು ವಿದೇಶ ಪ್ರಯಾಣ ಮಾಡಿದ ಯಾವ ವ್ಯಕ್ತಿಗಳನ್ನೂ ಸಂಪರ್ಕಿಸಿಲ್ಲ ಎಂಬುದನ್ನು ಪ್ರಾಥಮಿಕ ವರದಿಗಳು ದೃಢಪಡಿಸಿವೆ. ಈಗ ಮೃತಪಟ್ಟಿರುವ ವ್ಯಕ್ತಿ ವಾಸವಾಗಿದ್ದ ಅಪಾರ್ಟ್ಮೆಂಟ್ ಅನ್ನು ಸಂಪೂರ್ಣ ಲಾಕ್ಡೌನ್ ಮಾಡಲಾಗಿದೆ.
ಈ ಸಂಬಂಧ ವರದಿಗಳು ಬಿತ್ತರವಾಗುತ್ತಿದ್ದಂತೆಯೇ, ಇಡೀ ಧಾರಾವಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಮುಂಬೈವಾಸಿಗಳು ಟ್ವಿಟರ್ನಲ್ಲಿ ಅಭಿಯಾನ ಆರಂಭಿಸಿದ್ದಾರೆ.