ಜಲಿಯನ್ ವಾಲಾಬಾಗ್ ಹತ್ಯಾಕಾಂಡ : ಮಾಸದ ಕರಾಳ ನೆನಪು...
ಅದು ಭಾರತದೆಲ್ಲೆಡೆ ಸ್ವತಂತ್ರ ಹೋರಾಟದ ಕಿಚ್ಚು ಹೊತ್ತಿದ್ದ ಸಮಯ. ಅದೇ ರೀತಿಯಾಗಿ ಪಂಜಾಬ್ ನಲ್ಲೂ ಬ್ರಿಟಿಷರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಬ್ರಿಟೀಷ್ ಅಧಿಕಾರಿಗಳು ಸದಾ ಪ್ರಯತ್ನಿಸುತ್ತಿದ್ದರು. ಪಂಜಾಬ್ ನಲ್ಲಿ ಸಾರ್ವಜನಿಕ ಸಭೆಗಳನ್ನು ನಿಷೇಧಿಸುವ ರೌಲೆಟ್ ಕಾಯ್ದೆಯನ್ನು ಜಾರಿಗೋಳಿಸಲಾಗಿತ್ತು.
ಅಂದು ಏಪ್ರಿಲ್ 13, 1919 ಪಂಜಾಬ್ ನ ಜಲಿಯನ್ ವಾಲಾಬಾಗ್ ಎಂಬ ಸ್ಥಳದಲ್ಲಿ ಸಿಖ್ ಸಮುದಾಯದ ಸಾವಿರಾರು ಜನರು ಸಭೆ ಸೇರಿ ಬೈಸಾಕಿ ಎಂಬ ಸುಗ್ಗಿ ಹಬ್ಬವನ್ನು ಆಚರಿಸುತ್ತಿದ್ದರು. ಬೈಸಾಕಿ ಸುಗ್ಗಿ ಹಬ್ಬ. ಕರ್ನಾಟಕದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬದಂತೆ ಬೈಸಾಕಿ ಹಬ್ಬವನ್ನು ಸಿಖ್ ಸಮುದಾಯ ಆಚರಿಸುತ್ತದೆ. ಹಬ್ಬ ಆಚರಿಸಲು ನೆರೆದಿದ್ದ ಜನರು ಹಬ್ಬದೂಟ ಮಾಡಿ ಸಂಭ್ರಮಿಸುತ್ತಿದ್ದರು.
ಅದರೆ ಹಬ್ಬದ ಸಂಭ್ರಮದಲ್ಲಿದ್ದ ಜನರಿಗೆ ಮುಂದೆ ತಮಗೆ ಎದುರಾಗಬಹುದಾದ ಅನಾಹುತದ ಬಗ್ಗೆ ಅರಿವೇ ಇರಲಿಲ್ಲ. ಜಲಿಯನ್ ವಾಲಾಬಾಗ್ ಗೆ ತನ್ನ ಸೈನ್ಯದೊಂದಿಗೆ ಆಗಮಿಸಿದ್ದ ಪಂಜಾಬ್ ನ ಲೆಫ್ಟಿನೆಂಟ್ ಗವರ್ನರ್ ಮೈಕಲ್ ಡಯರ್ ಸಭೆಯಲ್ಲಿದ್ದ ಸಾವಿರಾರು ಜನರ ಮೇಲೆ ಗುಂಡಿನ ದಾಳಿ ನಡೆಸಲು ಆದೇಶಿಸಿದ. ಮಕ್ಕಳು ,ಹೆಣ್ಣುಮಕ್ಕಳು ಸೇರಿದಂತೆ ಸಾವಿರಾರು ಜನರ ಮೇಲೆ 100 ಜನ ಶಸ್ತ್ರಸಜ್ಜಿತ ಸೈನಿಕರು ಗುಂಡಿನ ಮಳೆಗೈದರು. ಜನರು ಸಭಾಂಗಣದ ಹೊರಹೋಗದಂತೆ ಎಲ್ಲಾ ಬಾಗಿಲುಗಳನ್ನು ಮುಚ್ಚಲಾಗಿತ್ತು.
ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುತ್ತೀದ್ದ ಪಂಜಾಬ್ ನ ಜನರಲ್ಲಿ ಭೀತಿ ಹುಟ್ಟಿಸಲು ಬ್ರಿಟೀಷ್ ಅಧಿಕಾರಿ ಡಯರ್ ಈ ತರದೊಂದು ಹೀನ ಕೃತ್ಯ ಎಸಗಿದ್ದ. ಈ ಕರಾಳ ಘಟನೆ ಸಂಭವಿಸಿ ಇಂದಿಗೆ 101 ವರ್ಷ. ಬ್ರಿಟೀಷ್ ಸರ್ಕಾರ ಈ ದುರಂತದಲ್ಲಿ ಸತ್ತವರು 500 ಜನ ಎಂದು ಹೇಳಿತು. ಆದರೆ ಅಲ್ಲಿ ಸತ್ತವರ ಸಂಖ್ಯೆ ಸಾವಿರ ದಾಟಿತ್ತು. ಭಾರತದ ಸ್ವತಂತ್ರ ಹೊರಾಟದ ಇತಿಹಾಸದಲ್ಲಿ ಇದೊಂದು ಎಂದು ಮರೆಯಲಾಗದ ಕರಾಳ ಅಧ್ಯಾಯವಾಗಿ ಉಳಿದಿದೆ.