ಹಾಡುಗಾರಿಕೆಯಲ್ಲಿ ವಿಭಿನ್ನವಾದ ಪ್ರಯೋಗ: ಶಹಭಾಷ್ ಎಂದ ಜನರು
ಸಾಮಾನ್ಯವಾಗಿ ಜನರು ವಿಭಿನ್ನವಾಗಿ ಕೆಲಸ ಮಾಡಲು ನೇರವಾಗಿ ಯೋಚಿಸುತ್ತಾರೆ. ಆದರೆ ಉಲ್ಟಾ ಯೋಚನೆ ಮಾಡುವ ಮೂಲಕ ಅನೇಕರು ಸಾಧನೆಯನ್ನ ಮಾಡಿದ್ದಾರೆ. ಹಾಡುಗಳೆಂದರೇ ಯಾರಿಗೆ? ಇಷ್ಟ ಇಲ್ಲ, ಮನಸ್ಸಿನ ನೆಮ್ಮದಿಗಾಗಿ ಹಾಡುಗಳನ್ನ ಕೇಳ್ತಾರೆ, ತಮಗೆ ತೋಚಿದ ರೀತಿಯಲ್ಲಿ ಒಬ್ಬೊಬ್ಬರೇ ಹಾಡುಗಳನ್ನ ಹಾಡ್ತಿರ್ತಾರೆ. ಇನ್ನೂ ಕೆಲವರು ಬಾತ್ ರೂಮ್ ಸಿಂಗರ್ಸ್ ಆಗಿರ್ತಾರೆ. ಆದರೆ ಮಂಡ್ಯದಲ್ಲಿ ಉಲ್ಟಾ ಹಾಡುಗಳನ್ನ ಹಾಡುವ ಮೂಲಕ ಜನರ ಗಮನವನ್ನು ಸೆಳೆಯುತ್ತಿದ್ದಾನೆ.
ಹಾಡುವುದು ಅಪ್ಪಟ ಕನ್ನಡ ಚಿತ್ರದ ಗೀತೆಗಳು.
ಮಂಡ್ಯದಲ್ಲಿ ನೆಲೆಸಿರುವ ಪ್ರಕಾಶ್, ಕುರಿಗಳನ್ನ ಸಾಕುತ್ತಿದ್ದು, ಇದರಿಂದ ತನ್ನ ಜೀವನವನ್ನ ನಡೆಸುತ್ತಿದ್ದಾನೆ. ಕುರಿಗಳನ್ನ ಸಾಕುವುದರ ಜೊತೆಗೆ ಉಲ್ಟಾ ಹಾಡುಗಳನ್ನ ಹಾಡುವ ಕಲೆ ಇವನಿಗೆ ಒಲಿದಿದೆ. ನೇರವಾಗಿ ಹಾಡುಗಳನ್ನ ಯಾರು? ಬೇಕಾದರೂ ಹಾಡಬಹುದು, ಆದರೆ ಅದೇ ಹಾಡು ರೆವೆರ್ಸ್ ಹಾಡು ಅಂತ ಹೇಳಿದರೆ, ಒಂದು ಕ್ಷಣ ಸ್ತಬ್ಧವಾಗಿ ನಿಂತು ಬಿಡುತ್ತಾರೆ. ಪ್ರಕಾಶ್ ಹಾಡುತ್ತಿದ್ದರೆ, ಇವನು ಯಾವ ಭಾಷೆಯ ಹಾಡನ್ನ ಹಾಡುತ್ತಿದ್ದಾನೆ ಎನ್ನುವ ಗೊಂದಲಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಇವನು ಹಾಡುವುದು ಅಪ್ಪಟ ಕನ್ನಡ ಚಿತ್ರದ ಗೀತೆಗಳು.
ಕೇಳುಗರು ಹುಬ್ಬೇರಿಸುವುದರಲ್ಲಿ ಅನುಮಾನವೇ ಇಲ್ಲ
ಕನ್ನಡ ಚಿತ್ರದ ಗೀತೆಗಳನ್ನ ರೆವೆರ್ಸ್ ಗೇರ್ ನಲ್ಲಿ ಲೀಲಾಜಾಲವಾಗಿ ಹಾಡುತ್ತಿದ್ದು, ಕೇಳುಗರು ಹುಬ್ಬೇರಿಸುವುದರಲ್ಲಿ ಅನುಮಾನವೇ ಇಲ್ಲ. ಪಿಯುಸಿ ವರೆಗೂ ಇವನು ವಿದ್ಯಾಭ್ಯಾಸ ಮಾಡಿದ್ದಾನೆ. ದಿನಚರಿಯ ಕೆಲಸಗಳ ನಡುವೆಯೂ ಏನಾದರೂ ವಿಭಿನ್ನವಾದ ಕೆಲಸ ಮಾಡಬೇಕೆಂದು ಈ ರೀತಿಯಾದ ಪ್ರಯೋಗಕ್ಕೆ ಕೈ ಹಾಕಿ ಜನರಿಂದ ಸೈ ಎನ್ನಿಸಿಕೊಂಡಿದ್ದಾನೆ.
ಸಾಹಿತ್ಯದ ಕಡೆಗೆ ಅಭಿರುಚಿ
ಸಾಹಿತ್ಯದ ಕಡೆ ಅಭಿರುಚಿಯನ್ನು ಹೊಂದಿರುವ ಪ್ರಕಾಶ್, ತಾನೇ ರಚಿಸಿದ ಕವನ ಸಂಕಲನದ ಪುಸ್ತಕವನ್ನು ಪ್ರಕಟಿಸಿದ್ದಾನೆ. ನೇರವಾಗಿ ಹಾಡುವ ಹಾಡುಗಾರರನ್ನ ಕಾಲನ್ನು ಎಳೆಯುವ ಜನರು, ಉಲ್ಟಾ ಸಿಂಗರ್ ನ ಸಹ ಟೀಕಿಸಿದ್ದಾರೆ. ಮಂಡ್ಯದಲ್ಲಿ ಇವನು ಉಲ್ಟಾ ಸಿಂಗರ್ ಎಂದೇ ಗುರುತಿಸಿಕೊಂಡಿದ್ದು, ಇವನ ಪ್ರತಿಭೆಗೆ ಜನರು ಬೆನ್ನು ತಟ್ಟಿದ್ದಾರೆ.
ಬರಹ: ಶ್ರೀ ಹರ್ಷ