ಕೇರಳದಿಂದ ರಾಜ್ಯಕ್ಕೆ ಕೋವಿಡ್ ಭೀತಿ
ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಪ್ರಯಾಣಿಕರು ಕೇರಳದಿಂದ ಬೆಂಗಳೂರಿಗೆ ಬರುತ್ತಿದ್ದಾರೆ. ಕೋವಿಡ್ ಟೆಸ್ಟ್ ಇಲ್ಲದೆ ಜನರು ಕರ್ನಾಟಕಕ್ಕೆ ರಾಜರೋಷವಾಗಿ ಕಾಲಿಡುತ್ತಿದ್ದಾರೆ. ಇದರಿಂದ ಬೆಂಗಳೂರಿಗೆ ಕೊರೊನ ಸೋಂಕು ಹಬ್ಬುವ ಎಲ್ಲಾ ಸಾಧ್ಯತೆಗಳಿವೆ. ನಮ್ಮ ಹತ್ತಿರ ಯಾವುದೇ ಕೋವಿಡ್ ವರದಿ ಇಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಈ ವಿಷಯದಲ್ಲಿ, ರಾಜ್ಯ ಸರ್ಕಾರ ನಿರ್ಲಕ್ಷ ತೋರಿಸುತ್ತಿದೆ. ಬಸ್ ನ ಚಾಲಕ, ಕಂಡಕ್ಟರ್ ಹತ್ತಿರ ಸಹ ಕೋವಿಡ್ ಟೆಸ್ಟ್ ರಿಪೋರ್ಟ್ ಇಲ್ಲ. ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೇರಳದಿಂದ ಬಸ್ ಗಳು ಬರುತ್ತಿವೆ.
ತಡವಾಗಿ ಎಚ್ಚೆತ್ತಿಕೊಂಡ ಸರ್ಕಾರ
ದಿನದಿಂದ ದಿನಕ್ಕೆ ಕೇರಳದಲ್ಲಿ, ಕೊರೊನ ಸೋಂಕಿನ ಪ್ರಕರಣ ಹೆಚ್ಚಾಗುತ್ತಿವೆ. ಆದರೂ ಸಹ ಕೇರಳ ಅಧಿಕಾರಿಗಳು ಮುನ್ನೆಚ್ಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೊಡಗಿನ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆಯವರು ಕೋವಿಡ್ ಪರೀಕ್ಷೆಯ ವ್ಯವಸ್ಥೆ ಒದಗಿಸರಲಿಲ್ಲ. ತಡವಾಗಿ ಎಚ್ಚೆತ್ತಿಕೊಂಡ ಸರ್ಕಾರ ಈಗ ಕೋವಿಡ್ ತಪಾಸಣೆಗೆ ಕರೆ ನೀಡಿದೆ.
ಕೆಂಗೇರಿ, ಆರ್.ವಿ ಕಾಲೇಜ್, ನಾಯಂಡ್ ಹಳ್ಳಿ, ರಾಜರಾಜೇಶ್ವರಿ ನಗರಗಳಲ್ಲಿ ಕೇರಳ ಬಸ್ ಗಳು ಓಡಾಟ ನಡೆಸುತ್ತಿದ್ದು, ಈ ಏರಿಯಾದ ಬಸ್ ಸ್ಟಾಪ್ ಗಳಲ್ಲಿ ಪ್ರಯಾಣಿಕರು ಇಳಿಯುತ್ತಿದ್ದಾರೆ.
ಬರಹ: ಶ್ರೀ ಹರ್ಷ