ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕಿಲ್ಲ ಜಾತಿ ಭೇದ: ನಾವೆಲ್ಲ ದೇವರ ಮಕ್ಕಳು
ಐತಿಹಾಸಿಕ ರಾಮ ಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ಜನರು ದೇಣಿಗೆಯನ್ನ ನೀಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಜನ ಸಾಮಾನ್ಯರಿಂದ ಹಿಡಿದು ಸಿನಿಮಾ ಕಲಾವಿದರವರಿಗೂ ದೇಣಿಗೆಯನ್ನ ನೀಡಿದ್ದು, ಈಗ ಒಬ್ಬ ಮುಸ್ಲಿಂ ಬಿಸಿನೆಸ್ ಮ್ಯಾನ್ ಬರೋಬ್ಬರಿ 1 ಲಕ್ಷ ಹಣವನ್ನ ನೀಡಿದ್ದಾನೆ.
ಕೋಮು ಸೌಹಾರ್ದತೆ ಕಾಪಾಡಬೇಕು
ಹಿಂದೂ ಹಾಗು ಮುಸ್ಲಿಂ ನಡುವೆ ಬೆಸೆದ ಕೋಮು ಸೌಹಾರ್ದತೆ ಕಾಪಾಡಬೇಕು, ನಾವೆಲ್ಲ ದೇವರ ಮಕ್ಕಳು. ನಾನು ಈ ನಂಬಿಕೆಯ ಮೇಲೆ 1 ಲಕ್ಷ ಹಣವನ್ನ ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದೇನೆ ಎಂದು ಬಿಸಿನೆಸ್ ಮ್ಯಾನ್ ಹಬೀಬ್ ಹೇಳಿದ್ದಾರೆ. ಕೋಮು ಸೌಹಾರ್ದತೆ ಕುರಿತು ಮಾತನಾಡುವ ಸಂದರ್ಭದಲ್ಲಿ, ಹಬೀಬ್ ದುಡ್ಡನ್ನ ದೇಣಿಗೆಗೆ ನೀಡಿದ್ದಾರೆ. ಇನ್ನೂ ತಮಿಳು ನಾಡು ಹಾಗು ಉತ್ತರ ಪ್ರದೇಶದಲ್ಲಿ ದೇಣಿಗೆ ಸಂಗ್ರಹದ ಪ್ರಕ್ರಿಯೆ ನಡೆಯುತ್ತಿದ್ದು, ಭಕ್ತ ವೃಂದದಿಂದ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ದಿನಗೂಲಿ ಕಾರ್ಮಿಕರಿಂದ ಇನ್ನೂ ಅಧಿಕವಾಗಿ ದೇಣಿಗೆಯ ಬೊಕ್ಕಸ ತುಂಬುತ್ತಿದೆ.
ಜನರು ಸ್ವಇಚ್ಛೆಯಿಂದ ಹಣವನ್ನ ನೀಡುತ್ತಿದ್ದಾರೆ
ಒಳ್ಳೆಯ ಉದ್ದೇಶಕ್ಕಾಗಿ, ಹಣ ನೀಡುವುದರಲ್ಲಿ ತಪ್ಪೇನಿಲ್ಲ, ನಾನು ಬೇರೆ ಯಾವುದೇ ಮಂದಿರಗಳಿಗೆ ದೇಣಿಗೆ ನೀಡಿಲ್ಲ, ಆದರೆ ರಾಮ ಮಂದಿರ ಅತ್ಯಂತ ಪ್ರಾಚೀನವಾದದ್ದು ಹಾಗೂ ದಶಕಗಳ ನಂತರ ಅಯೋಧ್ಯಾ ಸಮಸ್ಯೆ ಬಗೆಹರಿದಿದೆ. ದೇಣಿಗೆಯ ಮೊತ್ತ ಹೆಚ್ಚಾಗಬೇಕೆನ್ನುವ ನಿಲುವಿನೊಂದಿಗೆ, ಚೆನ್ನೈ ನ ಹಿಂದೂ ಮುನ್ನಾನಿ ಸಂಸ್ಥೆ ರಸ್ತೆ ಕಾರ್ಯಕ್ರಮಗಳನ್ನ ಏರ್ಪಡಿಸುತ್ತಿದ್ದರೆ, ಜನರು ಸ್ವಇಚ್ಛೆಯಿಂದ ಹಣವನ್ನ ನೀಡುತ್ತಿದ್ದಾರೆ.
50 ಲಕ್ಷ ಕೊಟ್ಟಿದ್ದಾನೆ
ಜನ ಜಂಗುಳಿಯ ನಡುವೆ, ಪ್ರಜೆ ಬಂದು 50 ಲಕ್ಷ ಕೊಟ್ಟಿದ್ದಾನೆ. ರಾಮ ಭಕ್ತರ ಪ್ರತಿಕ್ರಿಯೆಯನ್ನು ನೋಡುತ್ತಿದ್ದರೇ, ಬಹಳ ಖುಷಿಯಾಗುತ್ತದೆ ಎಂದು ಹಿಂದೂ ಮುನ್ನಾನಿ ಸಂಸ್ಥೆಯ ಅಧ್ಯಕ್ಷ ಎಳಂಗೋವನ್ ತಿಳಿಸಿದ್ದಾರೆ.