ವಿಂಟರ್ ನಲ್ಲಿ ಗ್ರೇಪ್ ಮಸಾಜ್..!
ಮಿಡ್ ವಿಂಟರ್ ಸೀಸನ್ನಲ್ಲಿ ಡ್ರೈ ಆದ ಸ್ಕಿನ್ ನ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸೀಸನ್ ಫ್ರೂಟ್ ದ್ರಾಕ್ಷಿ ಬಳಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್.
ದ್ರಾಕ್ಷಿಯ ಪೇಸ್ಟ್ ಮಾಡುವ ವಿಧಾನ.
ದ್ರಾಕ್ಷಿಯನ್ನು ನುಣ್ಣಗೆ ಪೇಸ್ಟ್ ನಂತೆ ಮಾಡಿ . ಒಂದು ಬೌಲ್ ನಲ್ಲಿ ಹಾಕಿ. ಅದಕ್ಕೆ ಚಿಟಿಕೆ ಅರಿಶಿನ ಸೇರಿಸಿ ಪೇಸ್ಟ್ ತಯಾರಿಸಿ.
ಮಸಾಜ್ ವಿಧಾನ.
ಬೆರಳಿನಲ್ಲಿ ಕೊಂಚ ಕೊಂಚವೇ ತೆಗೆದುಕೊಂಡು ಮುಖದ ಕೆನ್ನೆ ಭಾಗಕ್ಕೆ ವರ್ತುಲಾಕಾರವಾಗಿ ಮಸಾಜ್ ಮಾಡಿ. ಮೂಗಿನ ಭಾಗದ ಡೆಡ್ ಸ್ಕಿನ್ ಹಾಗೂ ವೈಟ್ ಬ್ಲಾಕ್ ಹೆಡ್ ರಿಮೂವ್ ಆಗುವಂತೆ ಮಸಾಜ್ ಮಾಡಿ. ಗಲ್ಲು ಕುತ್ತಿಗೆ ಭಾಗಕ್ಕೆ, ಕಿವಿಯ ಹಿಂಭಾಗಕ್ಕೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಸ್ಕಿನ್ ಟೈಟ್ ಆಗುತ್ತೆ. ಮುಖದ ಸ್ಕಿನ್ ಗ್ಲೋ ಹೆಚ್ಚಾಗುತ್ತೆ. ತ್ವಚೆ ಮೃದುವಾಗುತ್ತದೆ ವಿಂಟರ್ ನಲ್ಲಿ ಕಾಂತಿಯುತವಾಗಿ ಕಾಣುತ್ತದೆ.