ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.!!
ಬೆಂಗಳೂರು:-ವರವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿದೆ ಮೃತ ಮಹಿಳೆಯನ್ನು ಭರತನಗರದ ಎರಡನೇ ಹಂತದ ನಿವಾಸಿ ವನಿತಾ ಎಂದು ಗುರುತಿಸಲಾಗಿದೆ.
ಆಕೆಯ ಪತಿ ಕಿರಣ್ ಹಾಗೂ ಆತನ ಪೋಷಕರು ತಲೆಮರೆಸಿಕೊಂಡಿದ್ದಾರೆ ಆರೋಪಿಗಳ ಬಂಧನಕ್ಕಾಗಿ ಬಲೆ ಬಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವನಿತಾ ಅವರನ್ನು ಆರೋಪಿ ಕಿರಣ್ ಒಂದು ವರ್ಷದಿಂದ ವಿವಾಹವಾಗಿದ್ದ.ಆರೋಪಿ ಕಿರಣ್ ಆನ್ಲೈನ್ ನಲ್ಲಿ ಕೆಲವಸ್ತುಗಳನ್ನು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಅಲ್ಲದೆ ಈತನು ಇತರೆ ಮಹಿಳೆಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ. ಈ ಎಲ್ಲ ವಿಚಾರಗಳಿಗೆ ದಂಪತಿಗಳ ಮದ್ಯ ದಿನಾಲೂ ಜಗಳ ನೆಡೆಯುತ್ತಿತ್ತು.
ಈ ಎಲ್ಲ ಜಗಳಕ್ಕೂ ಬೇಸತ್ತ ಗೃಹಿಣಿಯು ತನ್ನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಎಂದು ಆರೋಪಿಸಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.