ಬೀದರ್ ನ ಹನ್ನೊಂದು ಜನರಿಗೆ ಕೊರೊನಾ ಸೋಂಕು ಧೃಢ......
ಬೀದರ್ : ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಗ್ ಜಮಾತ್ ನಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ಬೀದರ್ ನ 26 ಜನರ ಪೈಕಿ 11 ಜನರಿಗೆ ಕೊರೊನಾ ಸೋಂಕು ಇರುವುದು ಧೃಡಪಟ್ಟಿದೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಬೀದರ್ ಜಿಲ್ಲಾಧಿಕಾರಿ ಎಚ್.ಆರ್.ಮಹದೇವ್ ಸೋಂಕಿತ 11 ಜನರ ಸ್ರಾವದ ವೈದ್ಯಕೀಯ ವರದಿ
ಪಾಸಿಟಿವ್ ಬಂದಿದೆ. ಹೀಗಾಗಿ ಹನ್ನೊಂದು ಜನರನ್ನು ಬೀದರ್ ನ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಮಾರ್ಚ್ 10 ರಂದು ಬೀದರ್ ಜಿಲ್ಲೆಯಿಂದ ಒಟ್ಟು 26 ಜನ ದೆಹಲಿಗೆ ತೆರಳಿ ಪ್ರಾರ್ಥನಾ ಸಭೆಯಲ್ಲಿ ಭಾಗಿಯಾಗಿ ಮಾರ್ಚ್ 18 ರಂದು ಜಿಲ್ಲೆಗೆ ಮರಳಿದ್ದರು. ಜಿಲ್ಲೆಗೆ ಮರಳಿದ ನಂತರ ಈ 26 ಜನರನ್ನು 13 ದಿನಗಳ ಕಾಲ ಹೋಮ್ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು.
ಸದ್ಯ ನಗರದಲ್ಲಿ ಪೋಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.