ಸರ್ಕಾರಿ ಮದರಸಾಗಳನ್ನು ಮುಚ್ಚಲು ಅಸ್ಸಾಂ ಸಚಿವ ಸಂಪುಟ ಅಸ್ತು....!

ಗುವಾ಼ಟಿ: ಡಿಸೆಂಬರ್‌ನಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆಯ ಚಲಿಗಾಲದ  ಅಧಿವೇಶನದಲ್ಲಿ    ʼಅಸ್ಸಾಂ ಮದರಸಾ ಎಜ್ಯುಕೇಶನ್‌ ಆಕ್ಟ 1995ʼ ಮಸೂದೆಯನ್ನು ಸರಕಾರ ಪ್ರಸ್ಥಾಪಿಸಲಿದೆ. ಈ ಮಸೂದೆ ಜಾರಿಗೆ ಬಂದರೆ ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಎಲ್ಲ ಮದರಸಾ ಮತ್ತು ಅರೇಬಿಕ್‌ ಕಾಲೇಜುಗಳನ್ನು ಮುಚ್ಚಲಾಗುತ್ತದೆ.


ರವಿವಾರ ರಾಜ್ಯದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಈ ಮಸೂದೆ ಜಾರಿ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ  ರಾಜ್ಯದಲ್ಲಿರುವ ಮದರಸಾ ಮಂಡಳಿಯನ್ನು ವೀಲಿನಗೊಲಿಸಿ ಅದರ ಎಲ್ಲ ಶೈಕ್ಷಣಿಕ ಮತ್ತು ಆಡಳಿತ ಜವಾಬ್ದಾರಿಗಳನ್ನು ಪ್ರೌಢ ಶಿಕ್ಷಣ ಮಂಡಳಿಗೆ ವರ್ಗಾಯಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಧರ್ಮಶಾಸ್ತ್ರ ವಿಷಯಗಳನ್ನು ಬೋಧಿಸುತ್ತಿದ್ದ ಶಿಕ್ಷಕರಿಗೆ ಸಾಮಾನ್ಯ ವಿಷಯಗಳನ್ನು ಬೋಧಿಸಲು ತರಬೇತಿ ನೀಡುವುದಾಗಿ ಸರಕಾರ ತಿಳಿಸಿದೆ.

ʼಶಿಕ್ಷಣ ಕ್ಷೇತ್ರದಲ್ಲಿ ಜಾತ್ಯತೀತತೆಯನ್ನು ಜಾರಿಗೊಳಿಸುವಲ್ಲಿ ಈ ಮಸೂದೆ ಸಹಾಯ ಮಾಡಲಿದೆ. ಸ್ವಾತಂತ್ರಾನಂತರದಿಂದ ಇಸ್ಲಾಂ ಧರ್ಮಶಾಸ್ತ್ರದ ಅಧ್ಯನಯನಕ್ಕಾಗಿ ಸರಕಾರದಿಂದ ಪಡೆಯುತ್ತಿದ್ದ ಅನುದಾನವನ್ನು ನಾವು ಈಗ ರದ್ದು ಮಾಡುತ್ತಿದ್ದೇವೆʼಎಂದು ಅಸ್ಸಾಂನ ಶಿಕ್ಷಣ ಸಚಿವ ಹಿಮಂತ ಬಿಸ್ವಾ ತಿಳಿಸಿದ್ದಾರೆ.


ಹಿಮಂತ ಬಿಸ್ವಾರವರ ಪತ್ರಿಕಾ ಸಂದರ್ಶನದ ಪೂರ್ತಿ ವಿಡಿಯೋ ನೋಡಲು ಕೆಳಗಿನ ಲಿಂಕ್‌ ನೋಡಿ

 

ಸರಕಾರ ನಡೆಸುತ್ತಿರುವ ಮದರಸಾ ಶಾಲೆಗಳನ್ನು ಸಾಮಾನ್ಯ ಶಾಲೆಗಳನ್ನಾಗಿ ಪರಿವರ್ತಿಸಿ ‘High Madarasa’ ಎಂಬ ಹೆಸರನ್ನು ತೆಗೆಯಲಾಗುವುದು. ಸರಕಾರದ ಅನುದಾನದಡಿಯಲ್ಲಿ ಕಾರ್ಯ ನಿರ್ವಹಿಸುವ 189 ಮದರಸಾಗಳಲ್ಲಿನ ಧರ್ಮಶಾಸ್ತ್ರ ಅಧ್ಯಯನದ (ಖುರಾನ್‌  ಅಧ್ಯಯನ) ವಿಷಯವನ್ನು ಕೈ ಬಿಡಲಾಗುವುದು. ಎಪ್ರಿಲ್‌ 1, 2021 ರಿಂದ ಧರ್ಮಶಾಸ್ತ್ರ ಆಧಾರಿತ ಎಲ್ಲ ಕೋರ್ಸಗಳನ್ನು ನಿಲ್ಲಿಸಲಾಗುವುದು. 2021 ರಲ್ಲಿ ಕೊನೆಯ ಬಾರಿಗೆ ಸೆಬಾ (SEBA) ‘High Madarasa’ ಪರೀಕ್ಷೆಗಳನ್ನು ನಡೆಸಲಿದೆ. ಎಂದು ಬಿಸ್ವಾ ಹೇಳಿದ್ದಾರೆ.

ವರದಿ: ಮಂಜುನಾಥ್‌ ನಾಯಕ್