ಆಗುಂಬೆಯ ಪ್ರಕೃತಿ ಸೌಂದರ್ಯ ಅದ್ವಿತೀಯ .....
ಆಗುಂಬೆ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಂದು ಊರು. ಪಶ್ಚಿಮ ಘಟ್ಟದಲ್ಲಿರುವ ಈ ಊರು ಅದ್ವಿತೀಯ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಒಂದು ಪ್ರವಾಸಿ ಸ್ಥಳ. ಈ ಸುಂದರ ಪ್ರವಾಸಿ ತಾಣ ಅರಬ್ಬಿ ಸಮುದ್ರದಲ್ಲಿ ಮುಳುಗುವ ಸೂರ್ಯಾಸ್ಥದ ದೃಶ್ಯಕ್ಕಾಗಿ ಪ್ರಸಿದ್ಧವಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಆಕಾಶ ನಿರ್ಮಲವಾಗಿರುವುದರಿಂದ, ಮುಳುಗುವ ಸೂರ್ಯನ ದೃಶ್ಯ ಅತ್ಯಂತ ಮುದನೀಡುತ್ತದೆ.
ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಮಳೆ ಸುರಿಯುವ ಆಗುಂಬೆ ಪ್ರವಾಸಿ ತಾಣ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಸುಂದರ ಪ್ರವಾಸಿ ತಾಣವಾಗಿರುವ ಆಗುಂಬೆ, ಆಯುರ್ವೇದ ಗಿಡಮೂಲಿಕೆಗಳಿಂದ ಕುಡಿರುವ ಪ್ರದೇಶವಾಗಿರುವುದರಿಂದ ಪ್ರವಾಸಿಗರು ಸ್ವಾಸ್ಥ್ಯವನ್ನು ಸುಧಾರಿಸಿಕೊಳ್ಳಲು ಇಲ್ಲಿ ಆಗಮಿಸುತ್ತಾರೆ.
ಈ ಪ್ರದೇಶ ಭೇಟಿ ನೀಡುವ ಪ್ರವಾಸಿಗರು ಬರ್ಕನ ಜಲಪಾತ, ಕುಂಚಿಕಲ್ ಜಲಪಾತ, ಅಬ್ಬಿ ಫಾಲ್ಸ್, ಜೋಗಿ ಗುಂಡಿ ಮತ್ತು ಕೂಡ್ಲು ತೀರ್ಥ ಜಲಪಾತಗಳನ್ನು ವೀಕ್ಷಿಸಬಹುದಾಗಿದೆ. ಆಗುಂಬೆಯಲ್ಲಿ ಹಲವು ಪ್ರಭೇದದ ಪ್ರಾಣಿ ಮತ್ತು ಸಸ್ಯಗಳು ಕಂಡು ಬರುವುದರಿಂದ ಮಲೆನಾಡು ಸಂಶೋಧನಾ ಕೇಂದ್ರವಾಗಿದೆ.