ಸರಕಾರಿ ನೌಕರರಿಗೆ ಟೀ-ಶರ್ಟ್, ಜೀನ್ಸ್ ಧರಿಸದಂತೆ ಆದೇಶಿಸಿದ ಮಹಾರಾಷ್ಟ್ರ ಸರಕಾರ
ಮಹಾರಾಷ್ಟ್ರ ಸರಕಾರ ಹೊರಡಿಸಿರುವ ಹೊಸ ಆದೇಶದ ಪ್ರಕಾರ ಸರಕಾರಿ ಕಚೇರಿಗಳಲ್ಲಿ ಮಹಿಳೆಯರು ಸೀರೆ , ಸಲ್ವಾರ್ ,ಚೂಡಿದಾರ್ ಅಥವಾ ಅಗತ್ಯವಿದ್ದರೆ ಕುರ್ತಾ, ಶರ್ಟ್ ಮತ್ತು ದುಪಟ್ಟಾ ಜೊತೆಗೆ ಪ್ಯಾಂಟ್ ಧರಿಸಬಹುದು. ಪುರುಷರು ಪ್ಯಾಂಟ್ ಮತ್ತು ಶರ್ಟ್‌ಗಳನ್ನು ಧರಿಸಬೇಕು ಹಾಗೂ ಸರಕಾರಿ ಕಚೇರಿಗಳಲ್ಲಿ ಸಭ್ಯ ಡ್ರೆಸ್ ಕೋಡನ್ನು ಪಾಲಿಸಬೇಕೆಂದು ಸರಕಾರ ಆದೇಶ ಹೊರಡಿಸಿದೆ. ನೌಕರರು ವಾರಕ್ಕೋಮ್ಮೆ ಖಾದಿ ಬಟ್ಟೆಗಳನ್ನು ಧರಿಸಲು ಸರಕಾರ ಸಲಹೆ ನೀಡಿದೆ.
ಸರಕಾರಿ ನೌಕರರು ವಿಚಿತ್ರ ಶೈಲಿಯ ಪ್ರಿಂಟ್ ಅಥವಾ ಚಿತ್ರಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಆಡಳಿತ ಇಲಾಖೆ ಡಿಸೆಂಬರ್ 8 ರಂದು ಈ ಅದೇಶವನ್ನು ಜಾರಿಗೆ ತಂದಿದೆ. ಚಪ್ಪಲಿ ಬದಲಿಗೆ ಮಹಿಳೆಯರು ಸ್ಯಾಂಡಲ್ ಅಥವಾ ಬೂಟುಗಳನ್ನು ಧರಿಸಬೇಕು ಹಾಗೇಯೆ ಪುರುಷರು ಶೂ ಅಥಾವಾ ಸ್ಯಾಂಡಲ್ ಧರಿಸಬೇಕು ಎಂದು ಸರಕಾರ ತಿಳಿಸಿದೆ.
ಸರಕಾರದ ಈ ಆದೇಶಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರ ಮಾಡಬೇಕಾದಂತಹ ಕೆಲಸಗಳು ಬೇಕಾದಷ್ಟಿವೆ ಅದರೆ ಸರಕಾರ ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ತಲೆ ಕೆಡಿಸಿಕೊಳ್ಳತ್ತಿದೆ ಎಂದು ಟ್ವಿಟರ್‌ನಲ್ಲಿ ಹಲಾವರು ಜನ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸರಕಾರ ಈ ರೀತಿಯ ಅದೇಶಗಳನ್ನು ಹೊರಡಿಸುತ್ತಿರುವುದು ಹೊಸತೆನಲ್ಲ. ಈ ಹಿಂದೆಯೂ ಈ ರೀತಿಯ ಆದೇಶಗಳನ್ನು ಬೇರೆ ರಾಜ್ಯಗಳಲ್ಲಿಯೂ ಕೂಡ ಜಾರಿಗೆ ತರಲಾಗಿತ್ತು. ಮದ್ಯ ಪ್ರದೇಶ ಹಾಗೂ ಬಿಹಾರ ಕೂಡ ಈ ರೀತಿಯ ಆದೇಶಗಳನ್ನು ಹೊರಡಿಸಿದ್ದವು.
2018 ರಲ್ಲಿ ರಾಜಸ್ಥಾನ ಸರ್ಕಾರ ವಿದ್ಯಾರ್ಥಿಗಳು ಕಾಲೇಜ್ ಆವರಣಗಳಲ್ಲಿ ವೆಸ್ಟರ್ನ್ ಔಟ್ ಫಿಟ್ ಉಡುಪುಗಳನ್ನು ಧರಿಸುವುದನ್ನು ನಿಷೇಧಿಸಿ ಕೇವಲ ಸೆಲ್ವಾರ್ ಕಮೀಸ್ ಅಥವಾ ಸೀರೆಯನ್ನು ಧರಿಸಬೇಕೆಂದು ಆದೆಷ ಜಾರಿಗೆ ತಂದ್ದಿತ್ತು.
ವರದಿ: ಮೊನೀಕ