ತಿರುಕನ ಕನಸು ಕಾಣುತ್ತಿರುವ ಸಿದ್ದರಾಮಯ್ಯ : ಈಶ್ವರಪ್ಪ
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇದ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂಬ ಸಿದ್ದರಾಮಯ್ಯ ಹೇಳಿಕೆ ತಿರುಕನ ಕನಸಿನಂತೆ, ಅಲ್ಲದೇ ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುವುದು ಅಸಾಧ್ಯದ ಮಾತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
ಆನೇಕಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದ ಶೇಕಡ 90% ಜನ ಗೋಹತ್ಯೆ ನಿಷೇದ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಸಲುವಾಗಿ ಇಂತಹ ಹೇಳಿಕೆಯನ್ನು ನೀಡುತ್ತಿದ್ದಾರೆ. ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಗೋವುಗಳ ಕಳ್ಳತನ ಮಾಡುಲಾಗುತಿತ್ತು. ಗೋ ಕಳ್ಳತನ ಮಾಡುವಾಗ ಮಾಲೀಕರು ಮನೆಯಿಂದ ಹೊರಗಡೆ ಬಂದರೆ, ಕಳ್ಳರು ಚಾಕು ತೋರಿಸಿ ಹೆದರಿಸುತ್ತಿದ್ದರು. ಗೋವುಗಳನ್ನು ರಕ್ಷಿಸಲು ಅಲ್ಲಿನ ಯುವಕರು ಹರಸಾಹಸ ಪಡುತಿದ್ದಾರೆ ಹಾಗೂ ಗೋ ಹತ್ಯೆ ನಿಲ್ಲಿಸಲು ಹೋದ 28 ಯುವಕರು ಕೊಲೆ ಆಗಿದ್ದಾರೆ ಎಂದು ಹೇಳಿದರು.
ಈ ವಿಷಯದ ಬಗ್ಗೆ ನಾನು ವಿಧಾನಪರಿಷತ್ತಿನಲ್ಲಿ ಕೂಡ ಚರ್ಚೆ ಮಾಡಿದ್ದೆ. ಅಂದಿನ ಸಿದ್ದರಾಮಯ್ಯನವರ ಸರ್ಕಾರ ಆರೋಪಿಗಳ ವಿರುದ್ದು ಕ್ರಮ ಕೈಗೊಳ್ಳದೆ ಆರ್‌ಎಸ್ಎಸ್ ನವರ ವಿರುದ್ದ ಕ್ರಮ ಕೈಗೊಳ್ಳುತ್ತಿದ್ದರು. ಗೋ ಮಾತೆಯ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ವರದಿ: ಬಸವರಾಜ ಕುಂಬಾರ