ಪೊಗರು ವಿವಾದ ಮುಕ್ತಾಯ : ಬೇಷರತ್ ಕ್ಷಮೆ ಕೋರಿದ ದ್ರುವ ಸರ್ಜಾ
ಬರಹ:ಬಂಡಯ್ಯ ಹಿರೇಮಠ .
ಪೊಗರು ಚಿತ್ರ ಬ್ರಾಹ್ಮಣ ಸಮುದಾಯಕ್ಕೆ ಅವಮಾನ ಮಾಡಿದೆ ಎಂಬ ವಿವಾದಕ್ಕೆ ನಿರ್ದೇಶಕ ನಂದ ಕಿಶೋರ್ ಕ್ಷಮೆ ಕೇಳಿದ್ದಲ್ಲದೆ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎನ್ನಲಾದ ದೃಶಗಳಿಗೆ ಕತ್ತರಿ ಹಾಕಿದ್ದಾರೆ . ಇವತ್ತು ಪೊಗರು ಚಿತ್ರದ ನಟ ದ್ರುವ ಸರ್ಜಾ ಟ್ವೀಟರ್ ಮೂಲಕ ಕ್ಷಮೆ ಕೇಳಿದ್ದಾರೆ .
ನಮ್ಮ ಇಡೀ ಕುಟುಂಬ ಹನುಮಭಕ್ತರು.. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ, ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿಂದಲೂ ಹಿಂದೂತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ.. ನಾವು ಎಲ್ಲ ಧರ್ಮಗಳನ್ನೂ ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರ ಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ನೋವಾಗಿದೆ ಎನ್ನುವಂತಹ ಮಾತು ನಿಜಕ್ಕೂ ನಮ್ಮ ತಂಡಕ್ಕೆ ಬೇಸರ ತಂದಿದೆ. ಈ ಕಾರಣಕ್ಕಗಿಯೇ ಬೇಷರತ್ ಕ್ಷಮೆ ಕೇಳುತ್ತೇನೆ. ನಿಮಗೆ ಬೇಸರವಾಗಿರೋ ದೃಶ್ಯಗಳನ್ನು ಕತ್ತರಿಸಿದ್ದೇವೆ. ಮತ್ತೆ ಸೆನ್ಸಾರ್ ಆದಮೇಲೆ ನಿಮ್ಮೆದುರು ಮಾತಾಡೋಣ ಎಂದು ನಾನೇ ನಿರ್ಧರಿಸಿದ್ದೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನು ಪುರಸ್ಕರಿಸಿ ಎಂದಿನಂತೆ ನಿಮ್ಮ ಆಶೀರ್ವಾದವಿರಲಿ. ಜೈ ಹನುಮಾನ್.
- ದ್ರುವ ಸರ್ಜಾ
https://twitter.com/DhruvaSarja/status/1364562742976278531?s=20