5 ಮಕ್ಕಳ ತಾಯಿ ಮೇಲೆ 17 ಮಂದಿ ಸಾಮೂಹಿಕ ಅತ್ಯಾಚಾರ .
ಜಾರ್ಖಂಡ್‌ನ ಡುಮ್ಕಾ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 5 ಮಕ್ಕಳ ತಾಯಿಯಾಗಿರುವ 35 ವರ್ಷದ ಮಹಿಳೆ ಮೇಲೆ 17 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ನಡೆದಿದೆ. ತನ್ನ ಪತಿ ಜತೆ ಮಾರುಕಟ್ಟೆಯಿಂದ ಹಿಂದಿರುಗುತ್ತಿದ ವೇಳೆ, ದುಷ್ಕರ್ಮಿಗಳ ಗುಂಪೊಂದ ಇಬ್ಬರನ್ನೂ ಅಡ್ಡಗಟ್ಟಿದೆ. ಬಳಿಕ ಮಹಿಳೆಯ ಗಂಡನನ್ನು ಒತ್ತೆಯಾಗಿ ಇಟ್ಟುಕೊಂಡು, ಮಹಿಳೆ ಮೇಲೆ 17 ಜನ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಘಟನೆಯಲ್ಲಿ ಭಾಗಿಯಾಗಿದ್ದವರೆಲ್ಲಾ ಮದ್ಯಪಾನ ಸೇವಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾಳೆ..
ಇದೇ ವೇಳೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಸಂಬಂಧ ವಿಸೃತ ಮಾಹಿತಿ ಕೇಳಿರುವ ಆಯೋಗ, ಎರಡು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಜಾರ್ಖಂಡ್ ಪೊಲೀಸರಿಗೆ ಆದೇಶಿಸಿದೆ.
ವರದಿ : ಮೊನೀಕ