ಉದ್ಯಾನ ನಗರಿಯಲ್ಲಿ ಸ್ವದೇಶಿ ಮೇಳ

-ಅಭಿಜ್ಞಾ ಮತ್ತು ನಂದಿನಿ

ಬೆಂಗಳೂರು:  ಜಯನಗರದ ಚಂದ್ರ ಗುಪ್ತ ಮೌರ್ಯ ಮೈದಾನ(ಶಾಲಿನಿ ಗ್ರೌಂಡ್ಸ್)ದಲ್ಲಿ  ಏ.6 ರಿಂದ 10ರ ವರೆಗೆ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ʻಸ್ವದೇಶಿ ಮೇಳ'ವು ನಡೆಯಿತು. 

ನಾಲ್ಕು ದಿನಗಳ ಕಾಲ ನಡೆದ ಈ ಮೇಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಮೇಳದಲ್ಲಿ ಸಾವಿರಾರು ಜನರು ಭಾಗವಹಿಸಿ, ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಸಹ  ವ್ಯಾಪಾರಿಗಳು ಆಗಮಿಸಿ ತಮ್ಮ ಮಳಿಗೆ ತೆರೆದಿದ್ದರು.

ತೀರ್ಥಹಳ್ಳಿ ಎಂದರೆ ದೇವರ ದರ್ಶನವಾಗುವ ಸ್ಥಳ: ಸಿಎಂ ಬೊಮ್ಮಾಯಿ

ಯುವ ಜನತೆಗೆ ಸ್ವಉದ್ಯೋಗ ಮತ್ತು ಸಾವಯವ ಕೃಷಿ ಬಗ್ಗೆ ಮಾಹಿತಿ ಸಹ ನೀಡಲಾಯಿತು. ಮೇಳದಲ್ಲಿ ನೂರಾರು ಮಳಿಗೆಗಳು ಜನರ ಕಣ್ಮನ ಸೆಳೆದವು. ಮಣ್ಣಿನ ಮಡಿಕೆಗಳು, ಖಾದಿ ಉತ್ಪನ್ನಗಳು, ಚೆನ್ನಪಟ್ಟಣದ ಬೊಂಬೆ, ಕೈಮಗ್ಗದ ಇಳಕಲ್ ಸೀರೆ ಸ್ತ್ರೀಯರನ್ನು ಸೆಳೆದರೆ, ಮ್ಯಾಜಿಕ್ ಬುಕ್, ಮಿನಿಯೇಚರ್ ಆಟಿಕೆಗಳು ಮಕ್ಕಳ ಮನಸೂರೆಗೊಳಿಸಿದವು. ಇದರೊಂದಿಗೆ ಪುಸ್ತಕ ಮಳಿಗೆಗಳು ಸಾಹಿತ್ಯ ಪ್ರಿಯರನ್ನು ಆಕರ್ಷಿಸಿದವು.

 

ದಾವಣಗೆರೆ ಬೆಣ್ಣೆ ದೋಸೆ, ಡೆಲ್ಲಿ ಮಸಲಾ ಪಾಪಡ್, ಮಿರ್ಚಿ ಬಜ್ಜಿ, ಬಂಗಾರಪೇಟೆ ಚಾಟ್, ಮೇಲುಕೋಟೆ ಪುಳಿಯೋಗರೆ, ಬೆಣ್ಣೆ ಅಕ್ಕಿ ರೊಟ್ಟಿ, ಐಸ್ ಬರ್ಗ್, ಸಾವಯವ ಕಬ್ಬಿನ ಹಾಲು ಹೀಗೆ ವಿಧ ವಿಧವಾದ ತಿನಿಸುಗಳು-ಪಾನೀಯಗಳು ಆಹಾರ ಪ್ರಿಯರ ನಾಲಿಗೆ ತಣಿಸಿದವು. ತೇಜಸ್ವಿನಿ ಅನಂತ್‍ಕುಮಾರ್ ನೇತೃತ್ವದ ಅದಮ್ಯ ಚೇತನ ಸಂಸ್ಥೆಯು ಸ್ವದೇಶಿ ಮೇಳದಲ್ಲಿ ಆಹಾರ ಮಳಿಗೆಗಳ ಬಳಿ ಜೀರೊ ಗಾರ್ಬೇಜ್ ವ್ಯವಸ್ಥೆಯ ಉಸ್ತುವಾರಿಯನ್ನು ತೆಗೆದುಕೊಂಡಿದ್ದು ವಿಶೇಷ.  

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದರು.  
ದೇಶೀಯ ವಸ್ತುಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮೇಳವನ್ನು 2 ವರ್ಷಗಳ ಬಳಿಕ ಮತ್ತೆ ಆಯೋಜಿಸಲಾಗಿತ್ತು.