ದಲಿತ ಹುಡುಗಿಯೋಬ್ಬಳನ್ನು ಮದುವೆಯಾಗಿ : ಮಹಾತ್ಮಾ ಗಾಂಧಿಜೀಯವರ ಜಾತಿ ನಿರ್ಮೂಲನೆಯ ಕನಸು ನನಸು ಮಾಡಿ : ರಾಹುಲ್ ಗಾಂಧಿಗೆ ಕೆಂದ್ರ ಮಂತ್ರಿ ಅಠವಾಲೆ ಸವಾಲ್

ಕಾಂಗ್ರೇಸ್‌ ನಾಯಕ ರಾಹುಲ ಗಾಂಧಿ ʼನಾವಿಬ್ಬರು, ನಮಗಿಬ್ಬರುʼ ಎಂಬ ನೀತಿಯನ್ನು ಪ್ರಚಾರ ಮಾಡಬೇಕಾದರೆ ದಲಿತ ಹುಡುಗಿಯೊಬ್ಬಳನ್ನು ಮದುವೆಯಾಗಬೇಕು ಎಂದು ಕೇಂದ್ರ ಮಂತ್ರಿ ಮತ್ತು ದಲಿತ ನಾಯಕ ರಾಮದಾಸ್‌ ಅಠವಾಲೆ ಹೇಳಿದ್ದಾರೆ. ಇತ್ತಿಚಿಗೆ ರಾಹುಲ್‌ ಗಾಂಧಿ ʼಹಮ್‌ ದೋ, ಹಮಾರೆ ದೋʼ ಎಂದು ಹೇಳಿ ಪ್ರಧಾನಿ ಮೋದಿ  ಮತ್ತು ಗೃಹ ಮಂತ್ರಿ ಅಮಿತ ಷಾರನ್ನು ಟೀಕಿಸಿದ್ದರು.

“ಹಮ್‌ ದೋ, ಹಮಾರೆ ದೋ ಎಂಬ ಘೋಷ ವಾಕ್ಯವನ್ನು ಕುಟುಂಬ ಯೋಜನೆಗೆ ಬಳಸಲಾಗುತಿತ್ತು. ರಾಹುಲ ಗಾಂಧಿ ಇದನ್ನು ಪ್ರಚಾರ ಮಾಡಬೇಕೆಂದಿದ್ದರೆ ಅವರು ಮೊದಲು ಮದುವೆಯಾಗಲಿ. ದಲಿತ ಹುಡುಗಿಯೊಬ್ಬಳನ್ನು ಮದುವೆ ಆಗುವುದರ ಮೂಲಕ ಜಾತಿ ವ್ಯವಸ್ಥೆಯನ್ನು ನಾಶ ಮಾಡುವ ಮಹಾತ್ಮಾ ಗಾಂಧಿಜೀಯವರ ಕನಸು ನನಸು ಮಾಡಲಿ. ಇದು ಯುವ ಜನಾಂಗವನ್ನು ಪ್ರೇರೆಪಿಸುವಲ್ಲಿ ಸಹಾಯವಾಗುತ್ತದೆ” ಎಂದು ರಾಮದಾಸ್‌ ಅಠವಾಲೆ ಹೇಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಕಳೆದ ವಾರ ಸಂಸತ್ತಿನ ಅಧಿವೇಶನದಲ್ಲಿ ಅಮಿತ್‌ ಷಾ ಮತ್ತು ಪ್ರಧಾನಿ ಮೋದಿಯವರ ಜೋಡಿಯನ್ನು ಟಿಕಿಸುತ್ತಾ, ಈ ದೇಶವನ್ನು ಹಮ್‌ ದೋ, ಹಮಾರೆ ದೋ ಎಂಬ ಧೋರಣೆಯಿರುವ ಜನರು ನಡೆಸುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ್ದರು. ಇದರಿಂದ ಕೋಪಗೊಂಡ ಬಿಜೆಪಿಯ ಇತರ ನಾಯಕರು ರಾಹುಲ್‌ ಗಾಂಧಿ ರೈತ ಮಸೂದೆಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು ಹಬ್ಬಿಸುತ್ತಿರುವುದಾಗಿ ಹೇಳಿದ್ದರು.

ರಾಹುಲ್‌ರ ಹೇಳಿಕೆಗೆ ತೀರುಗೇಟು ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ “ ಕಾಂಗ್ರೇಸ್ ಕೂಡ  ಹಮ್‌ ದೋ, ಹಮಾರೆ ದೋ ಧೋರಣೆಯನ್ನೇ ಪಾಲಿಸುತ್ತ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜೊತೆಗೆ ಪ್ರಿಯಾಂಕಾ ಗಾಂಧಿ ಮತ್ತು ರೋಬರ್ಟ್‌ ವಾದ್ರಾರ ಆರೈಕೆ ಮಾಡುತ್ತಿದೆ.‌ ಹರ್ಯಾಣದ ಮಂತ್ರಿ ಕೂಡ ರಾಹುಲ್‌ರ ಹೇಳಿಕೆಗೆ ತೀರುಗೇಟು ನೀಡಿದ್ದು “ಕೇಂದ್ರ ಸರಕಾರ ಕೂಡ  ಹಮ್‌ ದೋ, ಹಮಾರೆ ದೋ ಸರಕಾರ ಎಂದ ರಾಹುಲ್‌ರಿಗೆ, ಬಹುಶಃ ಹಮ್‌ ದೋ, ಹಮಾರೆ ದೋ ಎಂಬ ಘೋಷವಾಕ್ಯವನ್ನು ಅವರ ಅಜ್ಜಿ ಇಂದಿರ ಗಾಂಧಿಯವರೇ ನೀಡಿದ್ದು ಎಂಬುದು ಗೊತ್ತಿರಲಿಕ್ಕಿಲ್ಲ” ಎಂದು ಹೇಳಿದ್ದಾರೆ.

ವರದಿ: ಮಂಜುನಾಥ್‌ ಅಜಿತ್