ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿ : ದೆಹಲಿ ಸರಕಾರ ನಿರ್ದೇಶ

ತೃತೀಯ ಲಿಂಗಿಗಳ ಕಲ್ಯಾಣಕ್ಕಾಗಿ ದೆಹಲಿ ಸರಕಾರ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಗಳನ್ನು ನಿರ್ಮಿಸುವಂತೆ  ತನ್ನ ಎಲ್ಲ ಇಲಾಖೆಗಳು, ಜಿಲ್ಲಾ ಪ್ರಾಧಿಕಾರಗಳು, ಪಾಲಿಕರಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ನಿರ್ದೇಶಿಸಿದೆ.

ತಕ್ಷಣಕ್ಕೆ ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ, ಅಂಗವಿಕಲ ವ್ಯಕ್ತಿಗಳಿಗೆ ಮೀಸಲಿರುವ ಶೌಚಾಲಯಗಳನ್ನು ತ್ರತೀಯ ಲಿಂಗಿಗಳಿಗೆ ಬಳಸಲು ಅವಕಾಶ ನೀಡುವಂತೆ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ. ನ್ಯೂ ದೆಲ್ಲಿ ಮ್ಯುನ್ಸಿಪಲ್ಕೌನ್ಸಿಲ್‌(ಎನ್ಎಮ್ಡಿಸಿ) ತನ್ನ 2021-22 ವಾರ್ಷಿಕ ಬಜೆಟ್ನಲ್ಲಿ ತೃತೀಯ ಲಿಂಗಿಗಳಿಗೆಗೋಸ್ಕರವೇ ಶೌಚಾಲಯಗಳನ್ನು ನಿರ್ಮಿಸಲು ನಿರ್ಧರಿಸಿದೆ. ಯೋಜನೆಗಾಗಿ ಸರಕಾರ ಎರಡು ವರ್ಷಗಳ ಗಡುವು ನೀಡಿದೆ.

  ಶೌಚಾಲಯಗಳು ಅಂಗವಿಕಲರ ಸಂಕೇತ ಮತ್ತು ತೃತೀಯ ಲಿಂಗಿಗಳು ಬಳಸುವ ಟಿ (T) ಸಂಕೇತಗಳನ್ನು ಹೊಂದಿರಬೇಕು. ತೃತಿಯ ಲಿಂಗಿಗಳು ತಾವು ನಿರ್ಧರಿಸಿದ ಲಿಂಗದ ಆಧಾರದ ಮೇಲೆ ಸಾಮನ್ಯ ಶೌಚಾಲಯಗಳನ್ನು ಬಳಸಲು ಕೂಡ ಅನುಮತಿ ನೀಡಬೇಕುಎಂದು ಸಾಮಜಿಕ ಕಲ್ಯಾಣ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿತ್ತು.

ಎನ್ಎಮ್ಡಿಸಿ ಮತ್ತು ದೆಹಲಿ ಪೋಲಿಸ್ಆಯುಕ್ತರಿಗಲ್ಲದೇ, ಎಲ್ಲ ಇಲಾಖೆಗಳ ಕಾರ್ಯದರ್ಶಿಗಳಿಗೆ, ದೆಹಲಿ ದಂಡು ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮತ್ತು ಎಲ್ಲ ಜಿಲ್ಲಾಧಿಕಾರಿಗಳಿಗೂ ಆದೇಶವನ್ನು ನೀಡಲಾಗಿದೆ.

ವರದಿ: ಮಂಜುನಾಥ್‌ ಅಜಿತ್