ಶ್ರೀಲಂಕಾ T20 ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ..?
ಶ್ರೀಲಂಕಾ ವಿರುದ್ಧದ ಟಿ-ಟ್ವೆಂಟಿ ಸರಣಿಗೆ, ಆರಂಭಿಕ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡೋ ಸಾಧ್ಯತೆ ಹೆಚ್ಚಿದೆ. ಈ ವರ್ಷ ರೋಹಿತ್ ಟೆಸ್ಟ್, ಏಕದಿನ, ಟಿ-ಟ್ವೆಂಟಿ ಮೂರೂ ಫಾರ್ಮೆಟ್ಗಳಲ್ಲೂ ಟೀಮ್ ಇಂಡಿಯಾವನ್ನ ಪ್ರತಿನಿಧಿಸಿದ್ರು. ಹೀಗಾಗಿ ಸತತ ಕ್ರಿಕೆಟ್ನಿಂದ ಬಳಲಿರುವ ರೋಹಿತ್, ಲಂಕಾ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಲಾಗಿದೆ. ಮತ್ತೊಂದೆಡೆ ಎಡಗಾಲಿಗೆ ಗಾಯಮಾಡಿಕೊಂಡು ತಂಡದಿಂದ ಹೊರಗುಳಿದಿದ್ದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಈಗ ಫುಲ್ ಫಿಟ್ ಆಗಿದ್ದು, ರೋಹಿತ್ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ. ಸಾಮಾನ್ಯವಾಗಿ ಟಿ-ಟ್ವೆಂಟಿ ಆಟಗಾರರಿಗೆ ಆಯ್ಕೆಗಾರರು ವಿಶ್ರಾಂತಿ ನೀಡೋದಿಲ್ಲ. ಆದ್ರೆ ರೋಹಿತ್ ಆಯ್ಕೆ ಸಮಿತಿಗೆ ಮನವಿ ಮಾಡಿಕೊಂಡಿರೋದ್ರಿಂದ, ಅವರಿಗೆ ರೆಸ್ಟ್ ನೀಡಲು ಬಿಸಿಸಿಐ ಮತ್ತು ಆಯ್ಕೆ ಸಮಿತಿ ತೀರ್ಮಾನಿಸಿದೆ.