ಯುವಕರೇ ಹುಷಾರ್ ?

 ಇಂಟರ್ನೆಟ್ ಅನ್ನೋದು ಒಂದು ಸಾಗರವಿದ್ದಂತೆ ಆಳಕ್ಕೆ ಹೋದಂತೆಲ್ಲ ಹೊಸ ಹೊಸ ಅನುಭವಗಳು ಆಗುತ್ತವೆ.  ಇಂಟರ್ನೆಟ್ ಅಲ್ಲಿ ಸಿಗದೇ ಇರೋದು ಏನೂ ಇಲ್ಲ  ಮನೆಯಲ್ಲಿ ಕುಳಿತೆ ಎಲ್ಲಿಬೇಕಾಜರೂ ಏನುಬೇಕಾದರೂ ನೋಡಬಹುದು. ಮತ್ತು ಯಾವುದೇ ವಿಷಯದ ಬಗ್ಗೆ ಬೇಕಾದರೂ ತಿಳಿದುಕೊಳ್ಳಬಹುದು.

  ಅಂತರ್ಜಾಲ ಅನ್ನೋದು ಒಂಥರ ಒಳ್ಳೆದ್ದು ಹೌದು ಕೆಟ್ಟದ್ದೂ ಹೌದು.  ಇವಾಗ ಮಕ್ಕಳು ಸ್ವಲ್ಪ ವಯಸ್ಸಿಗೆ ಬಂದಬಿಟ್ರೆ ಸಾಕು ಅವರು ಕೇಳೋದೇ ಅಪ್ಪ ಮೋಬೈಲ್ ಕೊಡ್ಸು ಲ್ಯಾಪ್ಟಾಪ್ ಕೊಡ್ಸು ಅಂತ.  ಅದರಿಂದ ನೀವು ಅನ್ಕೋತೀರ ನಮ್ಮ ಮಕ್ಕಳು ಓದ್ಕೋತಾರೆ ತುಂಬಾ ವಿಷಯಗಳನ್ನು ತಿಳ್ಕೋತಾರೆ ಅಂತಾ ಆದರೆ ಅದು ತಪ್ಪು !

ಮೊದ್ಲೇಲ್ಲಾ ಏನಾಗ್ತಾಯಿತ್ತು ಅಂದ್ರೆ ಅಜ್ಜ-ಅಜ್ಜಿ ಹೇಳೊ ಒಳ್ಳೆ ಒಳ್ಳೆ ಕಥೆಗಳನ್ನ ಕೇಳಿ ಬೆಳಿತಿದ್ದ ಮಕ್ಕಳು ಅಬ್ದುಲ್ ಕಲಾಂ ,ಮಾಹಾತ್ಮಾ ಗಾಂಧೀಜಿ ಸಂಗೊಳ್ಳಿ ರಾಯಣ್ಣ ಆಗ್ತಾಯಿದ್ರು ಯಾಕಂದ್ರೆ ಮಕ್ಕಳ ಮನಸ್ಸು ಮಣ್ಣಿನ ಮುದ್ದೆತರ.

ಅದರಮೇಲೆ ಯಾವ ಆಕಾರ ಬೀಳುತ್ತೋ ಅದೇ ಚಿತ್ತಾರ ಮೂಡುತ್ತೇ. ನಾವು ಹೇಳೋ ಕಥೆ ಆಡೋ ಮಾತು ಇರೊ ವಾತಾವರಣ ಅವರ ಮನಸ್ವಿನ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತೆ.

ಹಾಗಂತ ನಾನು ಇಂಟರ್ನೆಟ್ ಉಪಯೋಗಿಸ್ಲೇಬಾರದು ಅಂತಾ ಹೇಳ್ತಿಲ್ಲ ಹೇಗೆ ಉಪಯೋಗ ಮಾಡಬೇಕು ಯಾವುದಕ್ಕೆ ಉಪಯೋಗ ಮಾಡಬೇಕು ಅನ್ನೋದು ತುಂಬಾ ಮುಖ್ಯ ಅಂತ ಹೇಳ್ತಾಯಿದಿನಿ ಅಷ್ಟೇ.

 

ಯಾಕೆ ಮತ್ತೊಬ್ಬ ಶ್ರವಣ ಕುಮಾರ ಹುಟ್ಟತಾಯಿಲ್ಲ? ಯಾಕೆ ಮತ್ತೊಬ್ಬ ಅಬ್ದುಲ್ ಕಲಾಂ ಹುಟ್ಟತಾಯಿಲ್ಲ? ಇದಕ್ಕೆಲ್ಲಾ ಕಾರಣ ಇದೇ ನಮಗೆ ಸಂಬಂಧಗಳ ಬೆಲೆ ಗೊತ್ತಿಲ್ಲ ಯಾಕೆ ಮತತಾಡಿದ್ರೆ ವಿಡಿಯೋ ಕಾಲ್ ,ವಾಟ್ಸಾಪ್ ,ಫೇಸ್ಬುಕ್ ಯಾಕೆ ಮನೇಗಿ ಹೋಗಿ ಅವರೊಟ್ಟಿಗೆ ಟೈಮ್ ಕಳೆಯಿರಿ .

ಇಂಟರ್ನೆಟ್ ಬಳಕೆ  ಅನ್ನೋದು ನಮ್ಮ ಜ್ಞಾನ ಹೆಚ್ಚಿಸೋಕೆ ಇರೋದು ಯಾವುದೋ ಜಾಲಕ್ಕೆ ಬಲಿಯಾಗೋದಕ್ಕೆ ಅಲ್ಲ.

ಏನಾಗ್ತಾಯಿದೆ ಅಂದ್ರೆ ಅದೆಷ್ಟೋ ಯುವಕರು ಇಂಟರ್ನೆಟ್ ನಲ್ಲಿ ಸಿಗುವಂತಹ  ನೀಲಿ  ಅಶ್ಲೀಲ ಚಿತ್ರಗಳನ್ನ ನೋಡ್ತಾಯಿರೋದು ಈ ಒಂದು ನಮ್ಮ ದೇಶದಲ್ಲಿ ನಡಿತಿರೋ ಅತ್ಯಾಚಾರಕ್ಕೆ ಮುಖ್ಯ ಕಾರಣ ಅಂತಾನೇ ಹೇಳಬಹುದು .

 

ಅದರಿಂದ ಅಕ್ಕ ,ತಂಗಿ ,ಅಮ್ಮ ಇದ್ಯಾವ ಸಂಬಂಧಗಳ ಅರ್ಥವನ್ನ ತಿಳಿಯದೇ ಅತ್ಯಾಚಾರ ಪ್ರಕರಣಗಳು ಹೆಚ್ಚಾಗ್ತಾನೆ ಹೋಗ್ತಾಯಿದೆ ಅನ್ನೋದು ಸತ್ಯ ಸರ್ಕಾರ ಇದನ್ನ ಗಮನದಲ್ಲಿ ಇಟ್ಟುಕೊಳ್ಳುತ್ತೋ ಇಲ್ಲವೋ ಗೊತ್ತಿಲ್ಲ ಆದರೆ ತಮ್ಮ ಮಕ್ಕಳ ಮೇಲೆ ತಂದೆ ತಾಯಿ ಮಾತ್ರ ಎಚ್ಚರಿಕೆ ವಹಿಸಲೇಬೇಕು ಇದು ಎಲ್ಲಾ ತಂದೆ ತಾಯಿಯ ಕರ್ತವ್ಯ ಮಕ್ಕಳು ಏನು ಮಾಡ್ತಾಯಿದಾರೆ ಯಾಕೆ ಮೊಬೈಲ್ ಗೆ ಅಷ್ಟೊಂದು ಅಡಿಕ್ಟ ಆಗಿದಾರೆ ಎಲ್ಲಾನು ತಿಳ್ಕೋತ್ತಾಹೋದರೆ ಈ ಒಂದು ಸಮಸ್ಯೆನ ಬಗೆಹರಿಸಲು ಸಾಧ್ಯ.

 ಮಕ್ಕಳಿಗೆ ಮೊಬೈಲ್ ಕೊಡ್ಸಿ ಬೇಡ ಅನ್ನಲ್ಲ ಆದರೆ ಅವರುಗಳ ಚಟುವಟಿಕೆಗಳನ್ನ ನೀವು ಗಮನಿಸುತ್ತಾಯಿದ್ರೆ ನಮ್ಮ ಮಕ್ಕಳು ನಮ್ಮ ಆಸೆಯಂತೆ ಒಳ್ಳೆಯ ವ್ಯಕ್ತಿಗಳಾಗಿ ಬೆಳಿತಾರೆ.

 

✍️ ಸಂಜಯ್.ಕೊಳ್ಳಿ