ತಾವರಗೇರಾ ಪಟ್ಟಣದಲ್ಲಿ ನಡೆದ ಮೌನೇಶ್ವರ ರಥೋತ್ಸವ ಹಾಗೂ ಗವಿಶ್ರೀಗಳ ಪ್ರವಚನ ಕಾರ್ಯಕ್ರಮ....

ತಾವರಗೇರಾ ಪಟ್ಟಣದಲ್ಲಿ ಮೌನೇಶ್ವರ ರಥೋತ್ಸವ ಹಾಗೂ ಗವಿಶ್ರೀಗಳ ಪ್ರವಚನ ಕಾರ್ಯಕ್ರಮ ನಡೆಯಿತು.ದಿನಾಂಕ 9.2.2020 ರಂದು ಸಂಜೆ 5.45 ಗಂಟೆಗೆ ಭಾವೈಕ್ಯತೆಯ ಹರಿಕಾರ ಮಹಾಸಂತ ಶ್ರೀ ಜಗದ್ಗುರು ಮೌನೇಶ್ವರ ರಥೋತ್ಸವ ನಡೆಯಿತು.

ನಂತರ ಕೊಪ್ಪಳದ ಗವಿಮಠ ಸಂಸ್ಥಾನದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಮಾತಾಡುತ್ತಾ ಈ ಜಾತ್ರೆಯಲ್ಲಿ ಮಣ್ಣಿನ ಗುಣವು ಜೀವನವನ್ನು ತೋರಿಸುತ್ತದೆ.ದೇಶದ ಸಂಸ್ಕೃತಿಯನ್ನು ಉತ್ತಮವಾಗಿ ತೋರಿಸುತ್ತದೆ.ಪ್ರಾಶ್ಚಿಮತ್ಯ ದೇಶದಲ್ಲಿ ಭಾರತ ದೇಶದ ಮಣ್ಣಿನ ಲ್ಲಿ ಪ್ರಮುಖತೆ ಪಡೆದುಕೊಂಡಿದೆ. ಉದಾಹರಣೆಗಾಗಿ ಸೌತ್ ಆಫ್ರಿಕದ ಕ್ರಿಕೆಟಿನ ಆಲ್ರೌಂಡರ್ ಜಾಂಟಿ ರೋಡ್ಸ್ ಭಾರತದಲ್ಲಿ ತನ್ನ ಪತ್ನಿಯ ಗರ್ಭವನ್ನು ಧರಿಸಿ ತನ್ನ ಮಗುವಿಗೆ ಇಂಡಿಯಾ ಎಂದು ನಾಮಕರಣ ಮಾಡಿದರು.ಅವರ ಕನಸು ಹುಟ್ಟುವ ಮಗು ಭಾರತ ಮಣ್ಣಿನಲ್ಲಿ ಹುಟ್ಟಬೇಕೆಂಬುದು ಆಸೆಯಾಗಿತ್ತು ನಾವೆಲ್ಲರೂ ಈ ಮಣ್ಣಿನಲ್ಲಿ ಹುಟ್ಟಿದ್ದು ಸಾರ್ಥಕವಾಗಿದೆ.  ಸಂಸ್ಕೃತಿ ಎಂಬುವುದು ಹೊಟ್ಟೆ ಹಸಿದಾಗ ನಮ್ಮಲ್ಲಿರುವ ಒಂದು ತುತ್ತು ಅನ್ನ ಇನ್ನೊಬ್ಬರೊಡನೆ ಹಂಚಿಕೊಂಡು ತಿಂದಾಗ ಅದರಲ್ಲಿರುವ ತೃಪ್ತಿಯೇ ಸಂಸ್ಕೃತಿ ಎಂದು ಹೇಳಿದರು.

ಜೀವನದಲ್ಲಿ ಕಷ್ಟ,ಸುಖ,ದುಃಖ ಪ್ರಮುಖವಾಗಿ ಕಂಡುಬರುತ್ತವೆ ಇವುಗಳನ್ನು ನೀರಿನಲ್ಲಿ ಈಜಿಕೊಂಡು ಮುಂದೆ ಸಾಗುವುದೇ ಜೀವನ  ಸಂಸ್ಕೃತಿ.ಯಾವುದೇ ಕೆಲಸ ಮಾಡಲು ಪ್ರೇಮ ವಿರಬೇಕು ನಮ್ಮ ಮಾತು ಇನ್ನೊಬ್ಬರಿಗೆ ನೋವುಂಟು ಮಾಡಬಾರದು ಇನ್ನೊಬ್ಬರಿಗೆ ದೀಪದಂತೆ ಇರಬೇಕು ವರೆತು ಬೆಂಕಿಯಂತೆ ಅಚ್ಚಬಾರದು. ಗೆಳೆಯರು ನಿನ್ನ ಕಷ್ಟ ಕಾಲದಲ್ಲಿ ಕೈಹಿಡಿದು ಅಂತ ನಡೆಸುವಂತಹ ಗೆಳೆಯರನ್ನು ಮಾಡಬೇಕು.ಒಳ್ಳೆಯದನ್ನು ಮಾಡಬೇಕು. ಸಂಸ್ಕೃತಿ ಎಂಬುವುದು ಕೈ,ಬಾಯಿ,ಮನಸ್ಸು ಚೆನ್ನಾಗಿದ್ದರೆ ಅದೇ ಸಂಸ್ಕೃತಿ.ಶರಣರು ಕೈ,ಮನಸ್ಸು ಬಾಯಿ ಎಲ್ಲ ಸಂಗಮವೇ ಶರಣರ ಸಂಗಮವೇ ಸಂಸ್ಕೃತಿಯಾಗಿದೆ.

ಈ ಸಂದರ್ಭದಲ್ಲಿ ನಾಗಮಮೂರ್ತಿಂದ್ರ ಲೇಬಗೇರಿ ಮಠ, ಸಮಿತಿಯ ಅಧ್ಯಕ್ಷ ಉಮಣ್ಣ ಬಡಿಗೇರ,ಉಪಾಧ್ಯಕ್ಷ ಮಲ್ಲಪ್ಪ ಬಡಿಗೇರ ಹಾಗೂ ಸರ್ವ ಸದಸ್ಯರು ಮತ್ತು ಭಕ್ತರು ಭಾಗವಹಿಸಿದ್ದರು

ವರದಿ ಶರಣಪ್ಪ ಕುಂಬಾರ ತಾವರಗೇರಾ.