ರಣರಂಗವಾದ ರಾಷ್ಟ ರಾಜಧಾನಿ : ಗಲಭೆಯಲ್ಲಿ ಬಲಿಯಾದವರ ಸಂಖ್ಯೆ 13 ಕ್ಕೆ ಏರಿಕೆ.

ದೆಹಲಿ : ಪೌರತ್ವ ಕಾಯ್ದೆಯ ಕಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ರಾಷ್ಟ ರಾಜಧಾನಿ ನವದೆಹಲಿ ಮಂಗಳವಾರ ಅಕ್ಷರಶಃ ರಣರಂಗವಾಗಿತ್ತು. ಸಿಎಎ ಪರ ಹಾಗೂ ವಿರೋಧಿ ಗುಂಪುಗಳ ನಡುವಿನ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು , ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿದೆ.

ಈಶಾನ್ಯ ದೆಹಲಿಯ ಜಫಾರಾಬಾದ್,ಮೌಜ್ಪುರ್ , ವಿಜಯಾ ಪಾರ್ಕ್, ಚಾಂದ್ ಭಾಗ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗಲಭೆಕೋರರು ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದರು.ಈ ವೇಳೆ ಕಲ್ಲು ತೂರಾಟ ನಡೆದ ಪರಿಣಾಮ 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೋಲಿಸರು ಅಶ್ರವಾಯು ಪ್ರಯೋಗ ಮಾಡಿದರು. ಈಶಾನ್ಯ ದೆಹಲಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ತುರ್ತು ಸಭೆ ನಡೆಸಿದ ಅಮಿತ್ ಶಾ......

ಇನ್ನು ದೆಹಲಿಯಲ್ಲಿ ಹಿಂಸಾಚಾರ ಉಗ್ರ ರೂಪ ತಾಳುತಿದ್ದಂತೇ ಪರಿಸ್ಥೀತಿ ನಿಯಾಂತ್ರಿಸಲು ಕೇಂದ್ರ 
ಗ್ರಹ ಸಚಿವ ಅಮಿತ್ ಶಾ , ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಲೆ. ಗವರ್ನರ್ ಅನಿಲ್ ಬೈಜಲ್ ಜೊತೆ ತುರ್ತು ಸಭೆ ನಡೆಸಿದರು.